ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಕದಿನ ತಂಡಕ್ಕೆ ಮರಳಲು ನೆಟ್ಸ್‌ನಲ್ಲಿ ಪೂಜಾರ ಬೌಲಿಂಗ್

Vishwanath S
Updated On : 12 Mar 2014, 1:11 am

ನವದೆಹಲಿ: ಭಾರತೀಯ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತಿ    ಸುತ್ತಿರುವ ಟೆಸ್ಟ್ ಆಟಗಾರ ಚೇತೇಶ್ವರ ಪೂಜಾರ, ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಮುಂದಿನ ವಿಶ್ವಕಪ್‌ಗೆ ಆಯ್ಕೆಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾನು ಸಹ ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ್ದೇನೆ. ಈ ಮೂಲಕ ತಂಡದಲ್ಲಿ ಅರೆಕಾಲಿಕ ಬೌಲರ್ ಆಗಿ ತಂಡಕ್ಕೆ ಕಾಣಿಕೆ ನೀಡಲು ನೆರವಾಗಲಿದೆ. ತಂಡದ ನಾಯಕ ನನ್ನನ್ನು ಅರೆಕಾಲಿಕ ಬೌಲರ್ ಆಗಿ ಬಳಸಲು ನಿಧಂರಿಸಿದರೆ, ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ಇಚ್ಛಿಸುತ್ತೇನೆ. ಅಲ್ಲದೆ ನನ್ನ ಆಟವನ್ನು ಮತ್ತಷ್ಟು ವೃದ್ಧಿಸಿಕೊಳ್ಳುತ್ತಿದ್ದೇನೆ. ಬ್ಯಾಟಿಂಗ್‌ನಲ್ಲಿನ ತಪ್ಪುಗಳನ್ನು ಬಗೆಹರಿಸಿಕೊಳ್ಳುತ್ತಿದ್ದೇನೆ. ಇದು ಸುದೀರ್ಘವಧಿಯವರೆಗೆ ನೆರವಾಗಲಿದೆ ಎಂದು ಪೂಜಾರ ತಿಳಿಸಿದ್ದಾರೆ.
ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನದ ಮೂಲಕ ನನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಲು ಕಾಯುತ್ತಿದ್ದೇನೆ. ಏಕದಿನ ಮಾದರಿಯಲ್ಲೂ ನಾನು ಯಶಸ್ಸು ಸಾಧಿಸುವ ವಿಶ್ವಾಸವಿದೆ. ನಾನು ಆರ್‌ಸಿಬಿ ಪರ ಒಂದೆರಡು ಉತ್ತಮ ಇನಿಂಗ್ಸ್ ಆಡಿದ್ದೆ. ನಾನು ಸೀಮಿತ ಓವರ್‌ಗಳಲ್ಲಿ ಹೆಚ್ಚು ಅವಕಾಶ ಪಡೆದರೆ, ಉತ್ತಮ ಪ್ರದರ್ಶನ ನೀಡಬಹುದು ಎಂದು ಅವರು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement