ಮಲೇಷಿಯನ್ ಗ್ರ್ಯಾನ್ ಪ್ರೀಗೆ ಸಿಂಧು ಇಲ್ಲ
ನವದೆಹಲಿ: ಭಾರತದ ಉದಯೋನ್ಮುಖ ಆಟಗಾರ್ತಿ ಪಿ.ವಿ. ಸಿಂಧು ಮಾರ್ಚ್ 25ರಿಂದ 30ರ ವರೆಗೆ ನಡೆಯಲಿರುವ ಮಲೇಷಿಯನ್ ಗ್ರ್ಯಾನ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಬಿಡುವಿಲ್ಲದ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಿಂದಾಗಿ ಹೈದರಾಬಾದ್ನ ಸಿಂಧು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಹಾಗಾಗಿ, ಭಾರತೀಯ ಆಟಗಾರ್ತಿಗೆ ಈ ಬಾರಿ ಮಲೇಷಿಯನ್ ಗ್ರ್ಯಾನ್ ಪ್ರೀನಲ್ಲಿ ಹಾಲಿ ಚಾಂಪಿಯನ್ಪಟ್ಟ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ ನಂತರ ಇದೀಗ ಸ್ವಿಸ್ ಓಪನ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಅವರು ಬಿಡುವಿಲ್ಲದ ಟೂರ್ನಿಗಳಿಂದಾಗಿ ಸಾಕಷ್ಟು ಬಳಲಿದ್ದಾರೆ.