ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಆಸ್ಟ್ರೇಲಿಯಾಕ್ಕೆ ಆಫ್ರಿಕಾ ಶರಣು

Vishwanath S
Updated On : 14 Mar 2014, 1:04 am

ಡರ್ಬನ್: ಸಂಘಟಿತ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ಆಟಗಾರರು ಎರಡನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್‌ಗಳ ಜಯಭೇರಿ ಬಾರಿಸಿದ್ದಾರೆ.
ಕಿಂಗ್ಸ್‌ಮೇಡ್‌ನಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ನಿಗದಿತ ಓವರುಗಳ ಸಂಖ್ಯೆಯನ್ನು 7ಕ್ಕೆ ಸೀಮಿತಗೊಳಿಸಲಾಯಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ 1 ವಿಕೆಟ್ ನಷ್ಟಕ್ಕೆ 80 ರನ್‌ಗಳ ಉತ್ತಮ ಮೊತ್ತ ಸಂಪಾದಿಸಿತು. ಆರಂಭಿಕ ಕಿಂಟಾನ್ ಡಿ ಕಾಕ್ ಕೇವಲ 20 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ಸೇರಿದಂತೆ ಅಜೇಯ 41 ರನ್‌ಗಳಿಸಿದರು. ಫಫ್ ಡು ಪ್ಲೆಸಿಸ್ 13 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತು ಸಿಕ್ಸರ್ ನೆರವಿನಿಂದ 27 ರನ್‌ಗಳಿಸಿ ಅಜೇಯರಾಗುಳಿದರು.
ಆಸ್ಟ್ರೇಲಿಯಾ ದಾಳಿಯನ್ನು ಉತ್ತಮ ರೀತಿಯಲ್ಲಿ ದಂಡಿಸಿದ ಕಾಕ್ ಮತ್ತು ಪ್ಲೆಸಿಸ್ ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 31 ಎಸೆತಗಳಲ್ಲಿ 75 ರನ್ ಚಚ್ಚಿದರು.
ಉತ್ತರವಾಗಿ ಆಸ್ಟ್ರೇಲಿಯಾ 6.4 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲವಿನ ಗುರಿಯಾದ 81 ರನ್‌ಗಳಿಸುವ ಮೂಲಕ ರೋಚಕ ಗೆಲವು ತನ್ನದಾಗಿಸಿಕೊಂಡಿತು. ಆರಂಭಿಕ ಡೇವಿಡ್ ವಾರ್ನರ್ 16 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಹೊಂದಿದ್ದ 40 ರನ್‌ಗಳಿಸಿ ಆಸ್ಟ್ರೇಲಿಯಾದ ಜಯಭೇರಿಗೆ ಕಾರಣರಾದರು. ಕೆಳ ಕ್ರಮಾಂಕದಲ್ಲಿ ಕೇವಲ 8 ಎಸೆತಗಳನ್ನು ಎದುರಿಸಿದರೂ 1 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ ಅಜೇಯ 21 ರನ್‌ಗಳಿಸಿದ ಬ್ರಾಡ್ ಪಾಡ್ಜ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.
ದಕ್ಷಿಣ ಆಫ್ರಿಕಾ ಪರ ಜೀನ್ ಪಾಲ್ ಡುಮಿನಿ 2 ವಿಕೆಟ್ ಪಡೆದರು.  ಈ ಗೆಲವಿನೊಂದಿಗೆ ಆಸ್ಟ್ರೇಲಿಯಾ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯ ಮಳೆಗೆ ಆಹುತಿಯಾಗಿತ್ತು. ಮೂರನೇ ಪಂದ್ಯ ಶುಕ್ರವಾರ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ 7 ಓವರುಗಳಲ್ಲಿ 1 ವಿಕೆಟ್‌ಗೆ 80 (ಕಿಂಟಾನ್ ಡಿ ಕಾಕ್ ಅಜೇಯ 41, ಫಫ್ ಡು ಪ್ಲೆಸಿಸ್ ಅಜೇಯ 27, ಕೌಲ್ಟರ್ 17ಕ್ಕೆ1). ಆಸ್ಟ್ರೇಲಿಯಾ 6.4 ಓವರುಗಳಲ್ಲಿ 5 ವಿಕೆಟ್‌ಗೆ 81 (ಡೇವಿಡ್ ವಾರ್ನರ್ 40, ಬ್ರಾಡ್ ಹಾಡ್ಜ್ ಅಜೇಯ 21, ಜೀನ್ ಪಾಲ್ ಡುಮಿನಿ 5ಕ್ಕೆ2, ಅಬ್ಬಾಟ್ 5ಕ್ಕೆ1, ವೇಯ್ನ್ ಪಾರ್ನೆಲ್ 17ಕ್ಕೆ1)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement