ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬಾಂಗ್ಲಾ ವನಿತೆಯರ ಎದುರು ಭಾರತಕ್ಕೆ ಕ್ಲೀನ್‌ಸ್ವೀಪ್ ಗೆಲವು

Vishwanath S
Updated On : 14 Mar 2014, 1:04 am

ಕಾಕ್ಸ್ ಬಜಾರ್: ತಮ್ಮ ಸಂಘಟಿತ ಪ್ರದರ್ಶನವನ್ನು ಮುಂದುವರಿಸಿರುವ ಭಾರತ ವನಿತೆಯರ ತಂಡ ಬಾಂಗ್ಲಾದೇಶ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಗೆಲವು ದಾಖಲಿಸಿದೆ.
ಗುರುವಾರ ಇಲ್ಲಿನ ಶೇಕ್ ಕಮಲ್ ಇಂಟರ್‌ನ್ಯಾಷನ್ ಕ್ರಿಡಾಂಗಣದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ವನಿತೆಯರು 7 ವಿಕೆಟ್ ಅಂತರದಲ್ಲಿ ಬಾಂಗ್ಲಾ ವಿರುದ್ಧ ಗೆಲವು ದಾಖಲಿಸಿದ್ದಾರೆ. ಈ ಮೂಲಕ ಭಾರತ ಮೂರು ಟಿ20 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿಕೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 81 ರನ್‌ಗಳನಷ್ಟೇ ಗಳಿಸಲು ಶಕ್ತವಾಯಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ಭಾರತ ವನಿತೆಯರು 16.4 ಓವರ್‌ಗಳಲ್ಲಿ 3 ವಿಕೆಟ್‌ಗೆ 82 ರನ್ ದಾಖಲಿಸುವ ಮೂಲಕ ಗೆಲವಿನ ದಡ ಸೇರಿದರು. ಈ ಮೂಲಕ ಭಾರತ ವನಿತೆಯರು ಬಾಂಗ್ಲಾ ಪ್ರವಾಸದಲ್ಲಿ ಆತಿಥೇಯರ ವಿರುದ್ಧ ಸತತ ಮೂರು ಪಂದ್ಯಗಳಲ್ಲಿ ಗೆಲವು ದಾಖಲಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 81
(ಸಲ್ಮಾ ಖಾತುನ್ 34, ಆಯೆಶಾ ರೆಹಮಾನ್ 18, 13ಕ್ಕೆ3)
ಭಾರತ 16.4 ಓವರ್‌ಗಳಲ್ಲಿ 3 ವಿಕೆಟ್‌ಗೆ 82
(ಲತಿಕಾ ಕುಮಾರಿ 36, ಶಿಖಾ ಪಾಂಡೆ ಅಜೇಯ 26,ಸಲ್ಮಾ ಖಾತುನ್ 7ಕ್ಕೆ1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement