ಸ್ವಿಸ್ ಓಪನ್ ಸೈನಾ ಶುಭಾರಂಭ
ಬಾಸೆಲ್: ಭಾರತದ ಟೆನಿಸ್ ತಾರೆ ಹಾಗೂ ಒಲಿಂಪಿಕ್ಸ್ ಪದಕ ವಿಜೇತೆ ಸೈನಾ ನೆಹ್ವಾಲ್ ಸ್ವಿಸ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಇನ್ನು ಪುರುಷರ ವಿಭಾಗದಲ್ಲಿ ಪಿ.ಕಶ್ಯಪ್ ಹಾಗೂ ಆನಂದ್ ಪವಾರ್ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಬುಧವಾರ ರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಸೈನಾ ನೆಹ್ವಾಲ್ ತಮ್ಮ ಎದುರಾಳಿ ಜಪಾನ್ನ ಚಿಸಾಟೊ ಹೊಶಿ ವಿರುದ್ಧ ನೇರ ಸೆಟ್ಗಳ ಸುಲಭ ಗೆಲವು ದಾಖಲಿಸಿದ್ದಾರೆ. ಕೇವಲ 34 ನಿಮಿಷಗಳ ಕಾಲ ನೆಡದ ಪಂದ್ಯದಲ್ಲಿ ಆರನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್, ತಮ್ಮ ಎದುರಾಳಿ ಹೊಶೆ ವಿರುದ್ಧ ಪ್ರಾಬಲ್ಯ ಮೆರೆದರು. ಪಂದ್ಯದ ಆರಂಭದಿಂದಲೂ ಹೊಶೆ ಮೇಲೆ ನಿಯಂತ್ರಣ ಸಾಧಿಸಿದ ಸೈನಾ ಮೊದಲ ಸೆಟ್ ಅನ್ನು 21-12 ಅಂತರದಿಂದ ವಶ ಪಡಿಸಿಕೊಂಡರು. ಇನ್ನು ಎರಡನೇ ಸೆಟ್ನಲ್ಲೂ ತನ್ನ ನಿಯಂತ್ರಣ ಮುಂದುವರಿಸಿದ ಸೈನಾ, ಮತ್ತೆ 21-12 ಅಂತರದ ಮೇಲುಗೈ ಸಾಧಿಸುವ ಮೂಲಕ ಪಂದ್ಯಾವನ್ನು ಅನಾಯಾಸವಾಗಿ ಗೆದ್ದುಕೊಂಡರು.
ಇನ್ನು ಸೈನಾ ನೆಹ್ವಾಲ್ ತಮ್ಮ ಮುಂದಿನ ಪಂದ್ಯದಲ್ಲಿ ಫ್ರಾನ್ಸ್ನ ಸಶಿನಾ ವಿಗ್ನೆಸ್ ವಿರುದ್ಧ ಸೆಣೆಸಾಡಲಿದ್ದಾರೆ.
ಕಶ್ಯಪ್ ಮುಂದಡಿ: ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ತಾರೆ ಪಿ. ಕಶ್ಯಪ್ ತಮ್ಮ ಎದುರಾಳಿ ಜರ್ಮನಿಯ ಲುಕಾಸ್ ಶ್ಮಿದಿತ್ ವಿರುದ್ಧ ಗೆಲವು ದಾಖಲಿಸಿದ್ದಾರೆ.
ಬುಧವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಕಶ್ಯಪ್, 21-15, 21-14 ಅಂತರದ ನೇರ ಸೆಟ್ಗಳ ಗೆಲವು ದಾಖಲಿಸಿದರು. ಈ ಮೂಲಕ ಪ್ರೀಕ್ವಾಟರ್ಫೈನಲ್ ಸುತ್ತಿನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.
24 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಕಶ್ಯಪ್ ಎದುರಾಳಿಗೆ ಯಾವುದೇ ಹಂತದಲ್ಲೂ ಪ್ರತಿರೋಧ ನೀಡಲು ಅವಕಾಶ ನೀಡಲಿಲ್ಲ. ಮೊದಲ ಸೆಟ್ನಲ್ಲಿ 21-11 ಅಂತರದಿಂದ ಮುನ್ನಡೆ ಸಾಧಿಸಿದರೆ, ಎರಡನೇ ಸೆಟ್ನಲ್ಲಿ 21-4 ಅಂತರದಲ್ಲಿ ಮೇಲುಗೈ ಸಾಧಿಸುವ ಮೂಲಕ ಸುಲಭವಾಗಿ ಗೆಲವಿನ ನಗೆ ಬೀರಿದರು.
ಇನ್ನು ಕಶ್ಯಪ್ ತಮ್ಮ ಮುಂದಿನ ಪಂದ್ಯದಲ್ಲಿ ಮಲೇಷ್ಯಾದ ಬೆರಿನೊ ಜಿಯಾನ್ ಟೆಜ್ ವಾಂಗ್ ಅವರನ್ನು ಎದುರಿಸಲಿದ್ದಾರೆ.