ಆಸ್ಟ್ರೇಲಿಯಾ ಮಡಿಲಿಗೆ ಟಿ-20 ಸರಣಿ
ಸೆಂಚುರಿಯನ್: ಆಸ್ಟ್ರೇಲಿಯಾ ಆಟಗಾರರು ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ಗಳಿಂದ ಜಯಭೇರಿ ಬಾರಿಸಿದ್ದಾರೆ. ಈ ಗೆಲವಿನೊಂದಿಗೆ ಆಸ್ಟ್ರೇಲಿಯಾ 2-0 ಮುನ್ನಡೆಯೊಂದಿಗೆ ಸರಣಿ ತಮ್ಮದಾಗಿಸಿಕೊಂಡಿದ್ದಾರೆ.
ಇಲ್ಲಿನ ಸೂಪರ್ ಸ್ಪೋರ್ಟ್ ಪಾರ್ಕ್ನಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 7 ವಿಕೆಟ್ ನಷ್ಟಕ್ಕೆ 128 ರನ್ಗಳ ಸಾಧಾರಣ ಮೊತ್ತ ಗಳಿಸಿತು. ಉತ್ತರವಾಗಿ ಆಸ್ಟ್ರೇಲಿಯಾ ಇನ್ನೂ 5 ಓವರುಗಳು ಉಳಿದಿರುವಂತೆಯೇ 4 ವಿಕೆಟ್ ಕಳೆದುಕೊಂಡು 129 ರನ್ಗಳಿಸಿ ವಿಜಯೋತ್ಸವ ಆಚರಿಸಿತು.
ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಪಂದ್ಯಶ್ರೇಷ್ಠ ಹಾಗೂ ದಕ್ಷಿಣ ಆಫ್ರಿಕಾದ ಕಿಂಟಾನ್ ಡಿ ಕಾಕ್ ಸರಣಿಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ 20 ಓವರುಗಳಲ್ಲಿ 7 ವಿಕೆಟ್ಗೆ 128 (ಕಿಂಟಾನ್ ಡಿ ಕಾಕ್ 41, ಅಲ್ಬಿ ಮಾರ್ಕೆಲ್ 18, ವೇಯ್ನ್ ಪಾರ್ನೆಲ್ ಅಜೇಯ 17, ಮಿಚೆಲ್ ಸ್ಟಾರ್ಕ್ 16ಕ್ಕೆ2, ಗ್ಲೆನ್ ಮ್ಯಾಕ್ಸ್ವೆಲ್ 19ಕ್ಕೆ2, ಬ್ರಾಡ್ ಹಾಗ್ 31ಕ್ಕೆ2). ಆಸ್ಟ್ರೇಲಿಯಾ 15 ಓವರುಗಳಲ್ಲಿ 4 ವಿಕೆಟ್ಗೆ 129 (ಏರಾನ್ ಫಿಂಚ್ 39, ಶೇನ್ ವ್ಯಾಟ್ಸನ್ 35, ಗ್ಲೆನ್ ಮ್ಯಾಕ್ಸ್ವೆಲ್ 17, ಇಮ್ರಾನ್ ತಾಹಿರ್ 21ಕ್ಕೆ2).