ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರೋಸ್‌ಬರ್ಗ್ ಚಾಂಪಿಯನ್

Vishwanath S
Updated On : 17 Mar 2014, 1:20 am

ಮೆಲ್ಬೋರ್ನ್: ಋತುವಿನ ಮೊದಲ  ಫಾರ್ಮುಲಾ 1 ರೇಸ್‌ನಲ್ಲಿ ಸಂಪೂರ್ಣ ಪಾರಮ್ಯ ಮೆರೆಯುವಲ್ಲಿ ಸಫಲರಾದ ರೆಡ್‌ಬುಲ್ ತಂಡದ ನಿಕೋ ರೋಸ್‌ಬರ್ಗ್ ಅವರು ಆಸ್ಟ್ರೇಲಿಯಾ ಗ್ರ್ಯಾನ್ ಫ್ರಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.  ಆದರೆ, ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ, ರೆಡ್‌ಬುಲ್‌ನ ಸೆಬಾಸ್ಟಿಯನ್ ವೆಟಲ್ ಮತ್ತು ಮರ್ಸಿಡಿಸ್‌ನ ಲೂಯಿಸ್ ಹ್ಯಾಮಿಲ್ಟನ್ ಅವರು, ತಾಂತ್ರಿಕ ಕಾರಣಗಳಿಂದ ರೇಸ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ತಮ್ಮ ಕಾರಿನ ಎಂಜಿನ್‌ನಲ್ಲಿ ದೋಷ ಕಾಣಸಿಕೊಂಡ ಹಿನ್ನೆಲೆಯಲ್ಲಿ ಹ್ಯಾಮಿಲ್ಟನ್ ಅವರು 3ನೇ ಲ್ಯಾಪ್‌ನಲ್ಲಿ ನಿವೃತ್ತಿ ಪಡೆದರು. ಇನ್ನು ವೆಟಲ್ ಸಹ ತಮ್ಮ ಕಾರಿನ ಎಂಜಿನಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲೇ ನಿವೃತ್ತಿ ಪಡೆದರು.
ಇದೇ ಮೊದಲ ಬಾರಿಗೆ ರೆಡ್‌ಬುಲ್ ಪ್ರತಿನಿಧಿಸಿದ್ದ ಡೇನಿಯಲ್ ರಿಕಾರ್ಡೋ ಅವರು ದ್ವಿತೀಯ ಸ್ಥಾನ ಪಡೆದರು. ಎಫ್1 ವೃತ್ತಿಗೆ ಪದಾರ್ಪಣೆ ಮಾಡಿದ ಮೆಕ್ಲಾರೆನ್‌ನ ಕೆವಿನ್ ಮ್ಯಾಗ್ನಸೆನ್ 3ನೇ ಸ್ಥಾನ ಪಡೆಯುವ ಮೂಲಕ ಮಿಂಚಿದರು.    ಫೋರ್ಸ್ ಇಂಡಿಯಾಕ್ಕೆ ಅಂಕ ತಂದ ಹಲ್ಕನ್‌ಬರ್ಗ್: ಸಹರಾ ಫೋರ್ಸ್ ಇಂಡಿಯಾ ತಂಡಕ್ಕೆ ಮರಳಿದ ನಿಕೋ ಹಲ್ಕನ್‌ಬರ್ಗ್ ಅವರು ಅಂಕ ಗಳಿಸುವಲ್ಲಿ ಯಶಸ್ವಿಯಾದರು. ಸ್ಪರ್ಧೆಯಲ್ಲಿ 7ನೇ ಸ್ಥಾನ ಪಡೆದ ಅವರು, ಆರಂಭಿಕ ರೇಸ್‌ನಲ್ಲಿ ಫೋರ್ಸ್ ಇಂಡಿಯಾಕ್ಕೆ 6 ಅಂಕ ತಂದುಕೊಟ್ಟರು.ಗ್ರಿಡ್‌ನಲ್ಲಿ 7ನೇ ಸ್ಥಾನದಿಂದಲೇ ಸ್ಪರ್ಧೆಯನ್ನು ಆರಂಭಿಸಿದ ಹಲ್ಕನ್‌ಬರ್ಗ್ ಕಠಿಣ ಸವಾಲುಗಳನ್ನು ಎದುರಿಸಿದಾಗ್ಯೂ, 50.7 ಅವಧಿಯಲ್ಲಿ ರೇಸ್ ಮುಕ್ತಾಯಗೊಳಿಸುವ ಮೂಲಕ ತಮ್ಮ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು.
ಆದರೆ, ಹಲ್ಕನ್‌ಬರ್ಗ್ ತಂಡದ ಸಹ ಚಾಲಕ ಸೆರ್ಜಿಯೋ ಪೆರೆಜ್ ಅವರಿಗೆ ಲಕ್ ಕೈಹಿಡಿಯಲಿಲ್ಲ. ಸಹರಾ ಫೋರ್ಸ್ ಇಂಡಿಯಾ ಪರ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ ಪೆರೆಜ್ ಅವರು ಸ್ವಲ್ಪದರಲ್ಲೇ ಅಂಕ ಗಳಿಸುವುದರಿಂದ ಕೈಚೆಲ್ಲಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement