ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಲಂಕಾ ವಿರುದ್ಧ ಅಭ್ಯಾಸ ಸಮರ

Vishwanath S
Updated On : 17 Mar 2014, 1:19 am

ಮಿರ್‌ಪುರ: ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತವಾಗಿ ವೈಫಲ್ಯ ಕಾಣುತ್ತಿರುವ ಟೀಂ ಇಂಡಿಯಾ, ಐ್ನ್ನ ವಿಶ್ವ ಟಿ20 ಪಂದ್ಯಾವಳಿಯ ಮೊದಲ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸುತ್ತಿದ್ದು ಹೊಸ ಆರಂಭಕ್ಕಾಗಿ ಎದುರು ನೋಡುತ್ತಿದೆ.ಮಾರ್ಚ್ 21ರಂದು ಪಾಕಿಸ್ತಾನದ ವಿರುದ್ಧ ಪಂದ್ಯಾವಳಿಯಲ್ಲಿ ಭಾರತಕ್ಕೆ ನೈಜ ಸವಾಲು ಎದುರಾಗಲಿದೆ.
ಹೀಗಾಗಿ, ನೈಜ ಹೋರಾಟಕ್ಕೂ ಮುನ್ನ ಆಡುವ 11 ಆಟಗಾರರನ್ನು ಆಯ್ಕೆ ಮಾಡಿಕಳ್ಳಲು ನಾಯಕ ಮಹೇಂದ್ರ ್ನಂಗ್ ಧೋನಿ ಅವರಿಗೆ ಎರಡು ಅಭ್ಯಾಸ ಪಂದ್ಯಗಳು ನೆರವಾಗಲಿವೆ.ಹೀಗಾಗಿ ಈಗ ಎರಡು ಅಭ್ಯಾಸ ಪಂದ್ಯಗಳಲ್ಲಿ ತಂಡದಲ್ಲಿರುವ ಎಲ್ಲ 15 ಆಟಗಾರರಿಗೂ ಅವಕಾಶ ನೀಡುವ ಸಾಧ್ಯತೆಗಳಿವೆ.
ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅಭ್ಯಾಸ ಪಂದ್ಯಗಳು ಸೂಕ್ತ ಅವಕಾಶವನ್ನು ಒದಗ್ನಿಕೊಡಲಿವೆ. ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಪ್ರವಾಸದ ನಂತರ ಉಪಖಂಡದಲ್ಲೇ ನಡೆದ ಏಷ್ಯಾಕಪ್‌ನಲ್ಲಿ ವೈಫಲ್ಯ ಕಂಡಿರುವ ಟೀಂ ಇಂಡಿಯಾ ಆಟಗಾರರು ಹೊಸ ಅಲೆ ಮೂಡಿಸುವ ಅಗತ್ಯವಿದೆ.
ಅಲ್ಲದೆ, ಕಳೆದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯವನ್ನಾಡಿದ 5 ತಿಂಗಳ ನಂತರ ಈಗ ಭಾರತ ಟಿ20 ಪಂದ್ಯಾವಳಿಯಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಲಿದೆ. ಆಟಗಾರರು ಕ್ರೀಸ್‌ನಲ್ಲಿ ಸಮರ್ಥ ಜತೆಯಾಟ ಪ್ರದರ್ಶಿಸುವುದರ ಮೇಲೆ ಪಂದ್ಯದ ಫಲಿತಾಂಶ ಅವಲಂಬಿತವಾಗಿದೆ.
ಅದಕ್ಕೂ ಹೆಚ್ಚಾಗಿ ಈ ಮಾದರಿಯ ಕ್ರಿಕೆಟ್‌ನಲ್ಲಿ ಆರಂಭಿಕ ಜೋಡಿ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದು ಮತ್ತಷ್ಟು ಮಹತ್ವದ್ದಾಗಿದೆ. ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಅವರು ಏಕದಿನ ಕ್ರಿಕೆಟ್‌ನಲ್ಲಿ ಎಂದಿನ ಆರಂಭಿಕ ಜೋಡಿಯಾಗಿದೆ. ಈ ಮುನ್ನ ಏಕದಿನ ಕ್ರಿಕೆಟ್‌ನಲ್ಲಿ ಶ್ರೀಲಂಕಾ ವಿರುದ್ಧ ವೈಫಲ್ಯ ಕಂಡಿರುವ ರೋಹಿತ್ ಶರ್ಮಾ ಈಗಲಾದರೂ, ಮಿಂಚುವರೇ ಎಂಬುದು ಕುತೂಹಲ ಮೂಡ್ನಿದೆ.
ಟಿ20 ಮಾದರಿಯಲ್ಲಿ ರೋಹಿತ್ ಶರ್ಮಾಗೆ ಹೊಂದಿಕೊಂಡು ಆಡುವಷ್ಟು ಸಮಯ ನೀಡಲಾರದು. ಹೀಗಾಗಿ, ರಾಜಸ್ಥಾನ ರಾಯಲ್ಸ್ ಪರ ಐಪಿಎಲ್‌ನಲ್ಲಿ ಆರಂಭಿಕ ಆಟಗಾರನಾಗಿ ಯಶ್ನ್ವಯಾಗಿರುವ ಅಜಿಂಕ್ಯ ರಹಾನೆ ಅವರು ಧವನ್ ಅವರೊಂದಿಗೆ ತಕ್ಕ ಜತೆಯಾಟ ಪ್ರದರ್ಶಿಸುವ ಸಮರ್ಥ ಆಟಗಾರ ಎನ್ನಿದ್ದಾರೆ.ಇನ್ನು ಪಂದ್ಯ ಗೆಲ್ಲ್ನಿಕೊಡುವ ಆಟಗಾರರಲ್ಲಿ ಒಬ್ಬರಾಗಿರುವ ಯುವರಾಜ್ ್ನಂಗ್ ಅವರು ಏಷ್ಯಾ ಕಪ್‌ನಿಂದ ಹೊರಗುಳಿದಿರುವ ಸುರೇಶ್ ರೈನಾ
ಅವರೊಂದಿಗೆ ತಂಡಕ್ಕೆ ಮರಳಿದ್ದಾರೆ.
ಗಾಯದಿಂದ ಚೇತರ್ನಿಕೊಂಡಿರುವ ನಾಯಕ ಧೋನಿ ಅವರೊಂದಿಗೆ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ತಂಡಕ್ಕೆ ಆಶ್ರಯವಾಗಲಿದ್ದಾರೆ. ಇನ್ನು ಸ್ಟುವರ್ಟ್ ಬಿನ್ನಿ ಅವರಿಗೂ ಅವಕಾಶ ದೊರಕುವ ನಿರೀಕ್ಷೆಗಳಿವೆ.
ಭಿನ್ನ ಬೌಲಿಂಗ್ ಪ್ರತಿಭೆಗಳಿಲ್ಲದಿರುವುದು ಭಾರತ ತಂಡದ ಪ್ರಮುಖ ಆತಂಕವಾಗಿದೆ. ಮೊಹ್ಮದ್ ಶಮಿ ಕೊಂಚ ಯಶ್ನ್ವಯಾಗಿದ್ದರೆ, ಭುವನೇಶ್ವರ ಕುಮಾರ್ ಮತ್ತು ಮೋಹಿತ್ ಶರ್ಮಾ ಅಂತಾರಾಷ್ಟ್ರೀಯ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ವೈಫಲ್ಯ ಕಂಡಿದ್ದಾರೆ.
ಹೀಗಾಗಿ ್ನ್ಪನ್ ಬೌಲರ್‌ಗಳಾದ ಅಶ್ವಿನ್ ಮತ್ತು ರವಿಂದ್ರ ಜಡೇಜಾ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅಲ್ಲದೆ, ಈ ಇಬ್ಬರೂ ಬ್ಯಾಟಿಂಗ್‌ನಲ್ಲೂ ಮಿಂಚುತ್ತಿರುವುದು ಅವರಿಗೆ ತಂಡದಲ್ಲಿ ಸ್ಥಾನ ಖಚಿತಪಡಿಸಲಿದೆ.
ಇನ್ನೊಂದೆಡೆ ಏಷ್ಯಾ ಕಪ್ ಗೆದ್ದುಕೊಂಡಿರುವ ಶ್ರೀಲಂಕಾ, ಗೆಲ್ಲುವ ವಿಶ್ವಾಸದಲ್ಲಿದೆ. ತಂಡದಲ್ಲಿ ಮಹತ್ವದ ಪಾತ್ರವಹಿಸುತ್ತಿರುವ ದಿನೇಶ್ ಚಂಡಿಮಲ್ ಅವರೊಂದಿಗೆ ಮಹೇಲ ಜಯವರ್ದನೆ, ಕುಮಾರ ಸಂಗಕ್ಕಾರ ಸಹ ತಂಡದಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ. ಬೌಲಿಂಗ್‌ನಲ್ಲಿ ಲ್ನತ್ ಮಾಲಿಂಗ್ ಅವರು ಲಂಕೆಗೆ ಆಸರೆಯಾಗಲಿದ್ದಾರೆ.    
ಭಾರತ
ಮಹೇಂದ್ರ ್ನಂಗ್ ಧೋನಿ (ನಾಯಕ)
ವರುಣ್ ಎರಾನ್
ಸ್ಟುವರ್ಟ್ ಬಿನ್ನಿ
ಶಿಖರ್ ಧವನ್
ರವಿಂದ್ರ ಜಡೇಜಾ
ವಿರಾಟ್ ಕೊಹ್ಲಿ
ಭುವನೇಶ್ವರ ಕುಮಾರ
ಅಮಿತ್ ಮಿಶ್ರಾ
ಅಜಿಂಕ್ಯ ರಹಾನೆ
ರವಿಚಂದ್ರನ್ ಅಶ್ವಿನ್
ಸುರೇಶ್ ರೈನಾ
ಮೊಹ್ಮದ್ ಶಮಿ
ಮೋಹಿತ್ ಶರ್ಮಾ
ರೋಹಿತ್ ಶರ್ಮಾ
ಯುವರಾಜ್ ್ನಂಗ್.
ಶ್ರೀಲಂಕಾ
ದಿನೇಶ್ ಚಂಡಿಮಲ್ (ನಾಯಕ)
ತಿಲಕರತ್ನೆ ದಿಲ್ಷಾನ್
ರಂಗಣಾ ಹೆರಾತ್
ಮಹೇಲ ಜಯವರ್ದನೆ
ನುವಾನ್ ಕುಲಶೇಖರ
ಸುರಂಗಾ ಲಕ್ಮಲ್
ಲ್ನತ್ ಮಾಲಿಂಗ
ಆ್ಯಂಜೆಲೊ ಮ್ಯಾಥ್ಯೂಸ್
ಅಜಂತಾ ಮೆಂಡಿಸ್
ಕುಶಾಲ್ ಪೆರೇರಾ
4್ನಕುಗೆ ಪ್ರಸನ್ನಾ
ಕುಮಾರ ಸಂಗಕ್ಕಾರ
ಸಚಿತ್ರಾ ಸೇನಾನಾಯಕೆ
ಲಹಿರು ತಿರಿಮಾನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement