ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸಾನಿಯಾ-ಕಾರಾ ರನ್ನರ್ ಅಪ್‌ಗೆ ತೃಪ್ತಿ

Vishwanath S
Updated On : 17 Mar 2014, 1:19 am

ಇಂಡಿಯಾನ ವೆಲ್ಸ್: ಭಾರತದ ಸಾನಿಯಾ ಮಿರ್ಜಾ ಮತ್ತು ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಅವರು ಬಿಎನ್‌ಪಿ ಪಾರಿಬಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ಫೈನಲ್‌ನಲ್ಲಿ ಸೋಲನುಭವ್ನಿ ಪ್ರಶ್ನ್ತಯಿಂದ ವಂಚಿತರಾಗಿದ್ದಾರೆ.
ಶನಿವಾರ ರಾತ್ರಿ ನಡೆದ ಪ್ರಶ್ನ್ತ ಸುತ್ತಿನ ಪಂದ್ಯದಲ್ಲಿ ತೈವಾನಿನ ್ನಯೇ ಸು-ವೀ ಮತ್ತು ಚೀನಾದ ಪೆಂಗ್ ಶಾಯಿ ಅವರು 7-6 (7-5), 6-2 ನೇರ ಸೆಟ್‌ಗಳಿಂದ ಸಾನಿಯಾ ಮತ್ತು ಕಾರಾ ಅವರನ್ನು ಸೋಲ್ನಿ ಚಾಂಪಿಯನ್ ಎನ್ನಿದರು.
ಅಗ್ರಶ್ರೇಯಾಂಕಿತ ಜೋಡಿಯಾದ ್ನಯೇ ಮತ್ತು ಪೆಂಗ್ ಮುಂದೆ ಭಾರತ-ಜಿಂಬಾಬ್ವೆ ಜೋಡಿ ಕಠಿಣ ಸವಾಲುಗಳನ್ನೇ ನಿಲ್ಲ್ನಿತು. ಮೊದಲ ಸೆಟ್‌ನಲ್ಲಂತೂ ಗೆಲವಿಗಾಗಿ ಆಟಗಾರ್ತಿಯರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದಿತು. ಆದರೆ, ಸಾನಿಯಾ ಮತ್ತು ಕಾರಾ ಟೈಬ್ರೇಕರ್‌ನಲ್ಲಿ ಕೆಲ ಅನಗತ್ಯ ತಪ್ಪುಗಳನ್ನು ಎಸಗುವುದರೊಂದಿಗೆ ಎದುರಾಳಿಗೆ ಅಂಕ ಬಿಟ್ಟುಕೊಟ್ಟು ಹಿನ್ನಡೆ ಅನುಭವ್ನಿದರು.
ಈ ಗೆಲವಿನೊಂದಿಗೆ ತೈವಾನ್ ಮತ್ತು ಚೀನಾ ಜೋಡಿಯು ತಮ್ಮ ಗೆಲವಿನ ಮುನ್ನಡೆಯನ್ನು 11-0ಗೆ ವಿಸ್ತರ್ನಿಕೊಂಡರು.
ಫೆಡರರ್-ಜೊಕೊವಿಚ್ ಮುಖಾಮುಖಿ
ಈ ಮಧ್ಯೆ ಪುರುಷರ ್ನಂಗಲ್ಸ್ ವಿಭಾಗದಲ್ಲಿ ್ನ್ವಜರ್‌ಲ್ಯಾಂಡ್‌ನ ರೋಜರ್ ಫೆಡರರ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್ ಪರಸ್ಪರ ಸೆಣಸಲಿದ್ದಾರೆ. ಇದು ಫೆಡರರ್ ಮತ್ತು ಜೊಕೊವಿಚ್ ನಡುವಿನ 33ನೇ ಮುಖಾಮುಖಿಯಾಗಿದೆ.
ಫೆಡರರ್ ತಮ್ಮ ಸೆಮಿಫೈನಲ್ ಪಂದ್ಯದಲ್ಲಿ ಉಕ್ರೇನಿನ ಅಲೆಕ್ಸಾಂಡರ್ ಡೊಲ್ಗೊಪೊಲಾವ್ ಅವರನ್ನು 6-3, 6-1 ನೇರ ಸೆಟ್‌ಗಳಿಂದ ಪರಾಭವಗೊಳ್ನಿದರು.
ಏಳನೇ ಶ್ರೇಯಾಂಕಿತ ಆಟಗಾರ ಫೆಡರರ್ ಸುಮಾರು ಒಂದು ಗಂಟೆ 30 ನಿಮಿಷಗಳ ಆಟದಲ್ಲಿಯೇ ರೋಚಕ ಗೆಲವು ತಮ್ಮದಾಗ್ನಿಕೊಂಡರು.
ಮತ್ತೊಂದು ನಾಲ್ಕರಘಟ್ಟದ ಪೈಪೋಟಿಯಲ್ಲಿ ನೊವಾಕ್ ಜೊಕೊವಿಚ್ ಅವರು 7-5, 6-7 (2-7), 6-1 ಸೆಟ್‌ಗಳಿಂದ ಅಮೆರಿಕದ ಜಾನ್ ಇಸ್ನೇರ್ ಅವರನ್ನು ಮಣ್ನಿ ಮುನ್ನಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement