ಇಂದು ಕರ್ನಾಟಕ- ಮಧ್ಯಪ್ರದೇಶ ಮುಖಾಮುಖಿ
ಮೈಸೂರು: ಕಿರಿಯ ಮಹಿಳೆಯರ ನಾಲ್ಕನೆಯ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವು ಮಂಗಳವಾರ ಮಧ್ಯಪ್ರದೇಶ ತಂಡದ ವಿರುದ್ಧ ಸೆಣೆಸಲಿದೆ. ಎ ವಿಭಾಗದ ಬಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಉಭಯ ತಂಡಗಳು ಮಂಗಳವಾರ ಸಂಜೆ 4ಕ್ಕೆ ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದ ಹಾಕಿ ಟರ್ಫ್ನಲ್ಲಿ ಮುಖಾಮುಖಿ ಆಗಲಿವೆ.
ತಂಡದ ಪಟ್ಟಿ ಪ್ರಕಟಿಸಿದ್ದು, ಮೈಸೂರು ಸ್ಪೋರ್ಟ್ಸ್ ಹಾಸ್ಟೆಲ್ನ ಎಚ್.ಪಿ. ಸಂಧ್ಯಾ ಕರ್ನಾಟಕ ತಂಡದ ಸಾರಥ್ಯ ವಹಿಸುವರು. ಉಳಿದಂತೆ ತಂಡದಲ್ಲಿ ಎ.ಆರ್. ಅನುಶ್ರೀ, ಎ.ಎಚ್. ಕಾವೇರಿಯಮ್ಮ, ನಿಹಾ, ಸಿ.ಜಿ. ಸುಷ್ಮಾ ಅವರು ಉತ್ತಮ ಫಾರ್ಮ್ನಲ್ಲಿದ್ದಾರೆ. ತಂಡದ ಎ.ಬಿ. ಧಮಯಂತಿ ಮತ್ತು ಎನ್.ಎನ್. ನಿಶಾ ಗೋಲ್ ಕೀಪರ್ ಆಗಿದ್ದಾರೆ. ಜೈ ಮನೋವ ಕೋಚ್, ಬಿ.ಎ. ಚೆಂಗಪ್ಪ ವ್ಯವಸ್ಥಾಪಕರಾಗಿದ್ದಾರೆ. ಕರ್ನಾಟಕ ತಂಡವು ಮಾ. 19ರಂದು ಭೂಪಾಲ್ ಮತ್ತು ಮಾ. 20ರಂದು ದೆಹಲಿ ತಂಡವನ್ನು ಎದುರಿಸಲಿದೆ. ತಂಡವು ಉತ್ತಮ ಫಾರ್ಮ್ನಲ್ಲಿದ್ದು, ಎಲ್ಲ ಆಟಗಾರರು ಚೆನ್ನಾಗಿ ಆಡಬಲ್ಲರು ಎಂದು ಡಿವೈಎಸ್ಎಸ್ನ ಹಾಕಿ ಕೋಚ್ ವಿಜಯ್ ಕೃಷ್ಣ ತಿಳಿಸಿದ್ದಾರೆ. ತಂಡದ ವಿವರ: ಎ.ಬಿ. ಧಮಯಂತಿ (ಗೋಲ್ ಕೀಪರ್), ಸಿ.ಎಂ. ಭಾಗ್ಯಶ್ರೀ ಡಿ.ಎಂ. ಲಿಪಿತ, ಎನ್.ಆರ್. ಸ್ವಾಪ್ನ, ಬಿ.ಎಂ. ಕೋಮಲ, ಎ.ಎಚ್. ಕವೇರಿಯಮ್ಮ, ಎ.ಆರ್. ತನುಶ್ರೀ, ಎನ್. ರಮ್ಯ, ಸಿ.ಜಿ. ಸುಷ್ಮ, ಎಚ್.ಪಿ. ಸಂಧ್ಯಾ(ನಾಯಕಿ), ಎಸ್.ಪಿ. ಭವ್ಯ, ಎಂ.ಬಿ. ಅನಿತ ಕುಮಾರಿ, ನಿಹಾ, ಪಿ.ಸಿ. ನಿಶಾ, ಎಚ್.ಬಿ. ರಾಘ್ವಿ, ಎನ್.ಎನ್. ನಿಶಾ (ಗೋಲ್ ಕೀಪರ್), ಎಂ.ಡಿ. ಪೂಜಾ ಮತ್ತು ರುಚಿತಾ.