ಗೆಳತಿ ಕೊಲ್ಲುವ ಮುನ್ನ 6 ಗನ್ ಖರೀದಿಗೆ ಮುಂದಾಗಿದ್ದ ಪಿಸ್ಟೋರಿಯಸ್
ಪಿಸ್ಟೋರಿಯಸ್: ತಮ್ಮ ಗೆಳತಿ ರೀವಾ ಸ್ಟೀಂಕಪ್ ಅವರನ್ನು ಶೂಟ್ ಮಾಡಿ ಕೊಲ್ಲುವ ಮುನ್ನ, ಬ್ಲೇಡ್ ರನ್ನರ್ ಆಸ್ಕರ್ ಪಿಸ್ಟೋರಿಯಸ್ 6 ಗನ್ ಖರೀದಿಸಲು ಮುಂದಾಗಿದ್ದರಂತೆ. ಸೋಮವಾರ ನಡೆದ ವಿಚಾರಣೆಯಲ್ಲಿ ಈ ಅಂಶ ಬಹಿರಂಗವಾಗಿದೆ. ಇದು ದಕ್ಷಿಣ ಆಫ್ರಿಕಾ ಕಾನೂನು ನೀಡಿದ ಅನುಮತಿಗಿಂತ ಅಧಿಕವಾಗಿತ್ತು ಎನ್ನಲಾಗಿದೆ.
ಕಳೆದ ವರ್ಷ ಫೆಬ್ರವರಿ 14ರಂದು ತನ್ನ ಗೆಳತಿಯನ್ನು ಹತ್ಯೆ ಮಾಡಿದ್ದಕ್ಕೂ ಮುನ್ನವೇ, ಮೂರು ಶೂಟ್ ಗನ್ಗಳು, ಎರಡು ರಿವಾಲ್ವರ್ಗಳು ಹಾಗೂ ಒಂದು ರೈಫಲ್ ಖರೀದಿಗಾಗಿ ಪಿಸ್ಟೋರಿಯಸ್ ಮುಂದಾಗಿದ್ದರಂತೆ. 'ದಕ್ಷಿಣ ಆಫ್ರಿಕಾ ಕಾನೂನು ಪ್ರಕಾರ ವ್ಯಕ್ತಿಯೊಬ್ಬ ಕೇವಲ ನಾಲ್ಕು ಶಸ್ತ್ರಾಸ್ತ್ರಗಳನ್ನು ಮಾತ್ರ ಖರೀದಿಸಬಹುದಾಗಿದೆ. ಆದರೆ, ಪಿಸ್ಟೋರಿಯಸ್ ಶಸ್ತ್ರಾಸ್ತ್ರಗಳ ಬಗ್ಗೆ ತೀವ್ರ ಉತ್ಸಾಹ ಹೊಂದದ್ದರು' ಎಂದು ಆತನಿಗೆ ಗನ್ ಒದಗಿಸುತ್ತಿದ್ದ ಅಧಿಕೃತ ಮಾರಾಟಗಾರ ಸೀನ್ ರೆನ್ಸ್ ತಿಳಿಸಿದ್ದಾರೆ.
ರೆನ್ಸ್ 2012ರಲ್ಲಿ ಎರಡು ನಳಿಕೆಯ ಗನ್ ಖರೀದಿಸಿದ್ದರಂತೆ. ಆಗ ಪಿಸ್ಟೋರಿಯಸ್ 9 ಎಂಎಂ ಪಿಸ್ತೂಲ್ ಹೊಂದಿದ್ದರಂತೆ. ಆಗ ಇಬ್ಬರು ಸೇರಿ ಒಂದು ಶೂಟಿಂಗ್ ರೇಂಜ್ಗೆ ತೆರಳಿ ಹತ್ತು ಸುತ್ತು ಶೂಟ್ ಮಾಡಿದ್ದರಂತೆ.
ಈಗ ಪಿಸ್ಟೋರಿಯಸ್ ಮೂರು ಹೆಚ್ಚುವರಿ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಒಂದು ಹೋಟೆಲ್ ಒಂದರಲ್ಲಿ ಗನ್ ಫೈರ್ ಮಾಡಿದ್ದು. ಚಲಿಸುವ ಕಾರಿನಲ್ಲಿ ಗನ್ ಫೈರ್ ಮಾಡಿದ್ದು ಹಾಗೂ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ ಆರೋಪಗಳು.