ಬಿಲಿಯರ್ಡ್ಸ್ ತರಬೇತಿ ಶಿಬಿರ
ಬೆಂಗಳೂರು: ಕರ್ನಾಟಕ ಬಿಲಿಯರ್ಡ್ಸ್ ಸಂಸ್ಥೆ, ಬಿಲಿಯರ್ಡ್ಸ್ ತರಬೇತಿ ಶಿಬಿರವನ್ನು ಆಯೋಜಿಸುತ್ತಿದ್ದು, ನಕ್ಕೆ ನಾಲ್ಕು ಹಂತದಲ್ಲಿ ತರಬೇತಿ ನಡೆಸಲಾಗುವುದು.
ಮಧ್ಯಾಹ್ನ 1ರಿಂದ 2, 2ರಿಂದ 3, 3ರಿಂದ 4 ಹಾಗೂ 4ರಿಂದ 5ರವರೆಗೆ ಆಯೋಜಿಸಲಾಗುವುದು. ಈ ಶಿಬಿರಕ್ಕೆ 2,000 ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದು ಕೆಬಿಎ ಕಾರ್ಯದರ್ಶಿ ಎಸ್.ಬಾಸ್ಕರ್ ರಾಜ್ ಅರಸ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.