ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬ್ಯಾಡ್ಮಿಂಟನ್: ಬೇಸಿಗೆ ತರಬೇತಿ ಶಿಬಿರಕ್ಕೆ ಆಹ್ವಾನ

Mainashree
Updated On : 17 Mar 2014, 9:11 am

ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಪ್ರಸಕ್ತ ಸಾಲಿನ ವಾರ್ಷಿಕ ಬೇಸಿಗೆ ತರಬೇತಿ ಶಿಬಿರವನ್ನು ಏ.1ರಿಂದ ಆರಂಭಿಸಲಿದ್ದು, ಅಸಕ್ತರು ತರಬೇತಿ ಶಿಬಿರದಲ್ಲಿ ಭಾಗವಹಿಸಲು ಆಹ್ವಾನ ನೀಡಿದೆ.
ಈ ಬಾರಿಯ ತರಬೇತಿ ಶಿಬಿರವನ್ನು ಏ.1ರಿಂದ ಏ.24ರವರೆಗೆ ಆಯೋಜಿಸುತ್ತಿದೆ. ತರಬೇತಿ ಶಿಬಿರದಲ್ಲಿ ಸದಸ್ಯರು. ಸದಸ್ಯರ ಮಕ್ಕಳು ಹಾಗೂ ಅಥಿತಿಗಳ ಮಕ್ಕಳೂ ಸಹ ಭಾಗವಹಿಸಬಹುದಾಗಿದೆ. ವಾರದಲ್ಲಿ ಆರು ದಿನಗಳ ಕಾಲ ತರಬೇತಿ ಶಿಬಿರ ನಡೆಸಲಾಗುವುದು.
ತರಬೇತಿ ಶಿಬಿರವನ್ನು ಬೆಳಗ್ಗೆ 11 ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ನಡೆಸಲಾಗುವುದು. ಅಲ್ಲದೆ ತರಬೇತಿ ಶಿಬಿರದ ಶುಲ್ಕವನ್ನು 1600 ನಿಗದಿಪಡಿಸಲಾಗಿದೆ. ಆಸಕ್ತಿ ಇರುವವವರು ಕೆಬಿಎ ಕಚೇರಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement