ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭುಜದ ನೋವಿನಲ್ಲೇ ಶತಕ ಸಿಡಿಸಿದ್ದ ಮೈಕೆಲ್ ಕ್ಲಾರ್ಕ್

Mainashree
Updated On : 17 Mar 2014, 10:02 am

ಸಿಡ್ನಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅಂತಿಮ ಮತ್ತು ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದರೂ, ಆಸ್ಟ್ರೇಲಿಯಾ ತಂಡದ ನಾಯಕ ಮೈಕೆಲ್ ಕ್ಲಾರ್ಕ್ ಶತಕ ಸಿಡಿಸಿರುವುದು ಸೋಮವಾರ ಬಹಿರಂಗವಾಗಿದೆ. ಪಂದ್ಯದಲ್ಲಿ ಕ್ಲಾರ್ಕ್ ಭುಜದ ನೋವಿನಿಂದ ಬಳಲುತ್ತಿದ್ದರಂತೆ. ಅದಾಗ್ಯೂ ಶತಕ ಸಿಡಿಸಿದ್ದು ಸ್ಕ್ಯಾನಿಂಗ್‌ನಿದ ಬಹಿರಂಗವಾಗಿದೆ. ಇದೇ ತಿಂಗಳು ಕೇಪ್‌ಟೌನ್‌ನಲ್ಲಿ ನಡೆದ ಪಂದ್ಯದ ಮೊದಲ ದಿನದ ಆಟದಲ್ಲಿ ಕ್ಲಾರ್ಕ್‌ಗೆ ಬೌನ್ಸರ್‌ಗಳನ್ನು ಎದುರಿಸಲು ಅಂಜಿಕೆಯಾಗುತ್ತಿತ್ತಂತೆ. ಆಫ್ರಿಕಾದ ವೇಗಿ ಮಾರ್ನ್ ಮಾರ್ಕೆಲ್ ಅವರು ಎಸೆಯುತ್ತಿದ್ದ ಶಾರ್ಟ್ ಪಿಚ್ ಎಸೆತಗಳು, ಕ್ಲಾರ್ಕ್ ಅವರ ಹಣೆಗೆ, ಮೊಣಕೈ, ಭುಜ ಹಾಗೂ ಹೆಲ್ಮೆಟ್‌ಗೆ ಬಡಿಯುತ್ತಿದ್ದುದೇ ಇದಕ್ಕೆ ಕಾರಣವಾಗಿತ್ತಂತೆ.ಗಾಯದ ಸ್ಥಿತಿಯಲ್ಲೂ ಅಜೇಯ 161 ರನ್ ಗಳಿಸಿದ್ದ ಕ್ಲಾರ್ಕ್ ಅವರು, ತಮ್ಮ ವೃತ್ತಿಜೀವನದಲ್ಲಿ ಶ್ರೇಷ್ಠ ರನ್ ಗಳಿಸುವ ಮೂಲಕ ತಂಡ 3 ಪಂದ್ಯಗಳ ಸರಣಿಯಲ್ಲಿ 2-1 ಅಂತರದಿಂದ ಜಯ ಸಾಧಿಸಲು ಕಾರಣವಾಗಿದ್ದರು. ಗಾಯವಾದ ನಂತರವೂ ಕ್ಲಾರ್ಕ್ ಬ್ಯಾಟಿಂಗ್ ಮಾಡಿರುವುದನ್ನು ಸೋಮವಾರ ಸ್ಕ್ಯಾನ್ ವರದಿಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಈ ವಾರಾಂತ್ಯದಲ್ಲಿ ನಡೆಯಲಿರುವ ಆಸ್ಟ್ರೇಲಿಯಾದ ದೇಶೀಯ ಶಿಫೀಲ್ಡ್ ಶೀಲ್ಡ್ ಪಂದ್ಯಾವಳಿಯ ಫೈನಲ್‌ನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ನೂ ಸೌತ್ ವೇಲ್ಸ್ ಪರ ಆಡುವ ಅವರ ಕನಸು ಭಗ್ನಗೊಂಡಿದೆ. 'ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಮೈಕೆಲ್ ಕ್ಲಾರ್ಕ್ ಅವರು ಗಾಯಗೊಂಡಿದ್ದಾರೆ' ಎಂದು ಆಸ್ಟ್ರೇಲಿಯಾ ತಂಡದ ಫಿಸಿಯೋತೆಪಿಸ್ಟ್ ಅಲೆಕ್ಸ್ ಕೌಂಟೌರಿಸ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement