ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಡೆಲ್ಲಿಗೆ ಕೆಪಿ, ಪಂಜಾಬ್‌ಗೆ ಬೇಯ್ಲಿ ನಾಯಕ

Mainashree
Updated On : 18 Mar 2014, 9:54 am

ಚಂಡೀಗಡ: ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಜಾರ್ಜ್ ಬೇಯ್ಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ 7ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.       ಈ ವರ್ಷ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬಲಗೈ ಬ್ಯಾಟ್ಸ್‌ಮನ್ ಬೇಯ್ಲಿ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರು. 3.25 ಕೋಟಿ ನೀಡಿ ಖರೀದಿಸಿದೆ. 'ನಾನು ಕಿಂಗ್ಸ್ ಇಲೆವೆನ್ ತಂಡವನ್ನು ಈ ಋತುವಿನಲ್ಲಿ ಮುನ್ನಡೆಸಲು, ಕಾತರದಿಂದ ಎದುರು ನೋಡುತ್ತಿದ್ದೇನೆ. ಫ್ರಾಂಚೈಸಿ ಮತ್ತು ಅಭಿಮಾನಿಗಳ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದೇನೆ. ಅಲ್ಲದೆ,
   ತಂಡದಲ್ಲಿರುವ ಶ್ರೇಷ್ಠ ಆಟಗಾರರೊಂದಿಗೆ ಪ್ರದರ್ಶನ ನೀಡಲು ಕಾತರದಿಂದ ಕಾಯುತ್ತಿದ್ದೇನೆ' ಎಂದಿದ್ದಾರೆ ಬೇಯ್ಲಿ.
ಡೆಲ್ಲಿಗೆ ಕೆಪಿ ನಾಯಕ: ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವೈಫಲ್ಯ ಕಂಡ ನಂತರ ಆಂಗ್ಲಪಡೆಯಿಂದ ಹೊರಗುಳಿದಿರುವ ಕೆವಿನ್ ಪೀಟರ್ಸನ್ ಅವರು, ಐಪಿಎಲ್‌ನ 7ನೇ ಆವೃತ್ತಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರು ಉಪ ನಾಯಕರಾಗಿದ್ದಾರೆ.
'ಇಂಡಿಯನ್ ಪ್ರೀಮಿಯರ್ ಲೀಗ್‌ನ ಈ ಆವೃತ್ತಿಯಲ್ಲಿ ಕೆವಿನ್ ಪೀಟರ್ಸನ್ ಅವರು ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ' ಎಂಡು ಡೇರ್‌ಡೆವಿಲ್ಸ್ ತಂಡ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement