ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಿಶ್ವಾಸದಲ್ಲಿ ವೈಟ್

Mainashree
Updated On : 18 Mar 2014, 10:39 am

ಮಿರ್‌ಪುರ: ಪ್ರಸಕ್ತ ಋತುವಿನಲ್ಲಿ ಐಪಿಎಲ್ ತಂಡಗಳಿಂದ ಕಡೆಗಣಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ ಬೇಸತ್ತಿರುವ ಆಸ್ಟ್ರೇಲಿಯಾದ ಕೆಮರೂನ್ ವೈಟ್ ಅವರು, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ತಮ್ಮ ಸಾಮರ್ಥ್ಯ ಎನೆಂಬುದನ್ನು ತೋರಿಸಲು ಕಾದಿದ್ದಾರಂತೆ.
'ಐಪಿಎಲ್ ಹರಾಜಿನಲ್ಲಿ ನನ್ನನ್ನು ಕಡೆಗಣಿಸಿದ್ದು ನನಗೆ ಬೇಸರ ಉಂಟುಮಾಡಿದೆ. ಆದರೆ, ಅದೇ ಮಾದರಿಯಲ್ಲಿ ನಡೆಯುವ ವಿಶ್ವಕಪ್ ಟಿ20 ಪಂದ್ಯಾವಳಿಯಲ್ಲಿ ಆಡುವ ಅವಕಾಶ ಸಿಕ್ಕರೆ, ನನ್ನ ಸಾಮರ್ಥ್ಯ ಎನೆಂಬುದನ್ನು ಸಾಬೀತುಪಡಿಸುತ್ತೇನೆ' ಎಂದು ವೈಟ್ ಹೇಳಿದ್ದಾರೆ.
ಈಗಾಗಲೇ ಕಠಿಣ ತಾಲೀಮಿಗೆ ಅಣಿಯಾಗಿದ್ದು, ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದೇನೆ ಎಂದು ಕೆಮರೂನ್ ವೈಟ್ ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement