ಫುಟ್ಬಾಲ್: ಸೆಮೀಸ್ಗೆ ಬಿಡಿಎಫ್ಎ
ಪಾಟ್ನಾ: ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಆಟಗಾರರು ಬಿಹಾರ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿದೆ.
ಬುಧವಾರ ಮೊಹಿನ್ ಉಲ್ ಹಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಡಿಎಫ್ಎ ತಂಡವು 2-1 ಗೋಲುಗಳ ಅಂತರದಲ್ಲಿ ಕೋಲ್ಕತಾದ ಪೀರ್ಲೆಸ್ ಫುಟ್ಬಾಲ್ ಕ್ಲಬ್ ವಿರುದ್ಧ ಗೆಲವು ದಾಖಲಿಸಿದೆ.
ಬಿಡಿಎಫ್ಎ ಪರ 15ನೇ ನಿಮಿಷದಲ್ಲಿ ಗೋಪಿ ಗೋಲು ದಾಖಲಿಸಿ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ನಂತರ 29ನೇ ನಿಮಿಷದಲ್ಲಿ ಗೋಪಿ ಮತ್ತೊಂದು ಗೋಲು ದಾಖಲಿಸಿ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇನ್ನು ಎದುರಾಳಿ ತಂಡದ ಪರ ಡೇನಿಯಲ್ ಎಜ್ 44ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸೋಲಿನ ಅಂತರ ಕಡಿಮೆ ಮಾಡಿದರು.