ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬರಲಿದೆ ಸೂಕ್ಷ್ಮ ಸಂವೇದಿ ಡೋಪಿಂಗ್ ಟೆಸ್ಟ್

Mainashree
Updated On : 19 Mar 2014, 11:06 am

ವಾಷಿಂಗ್ಟನ್: ಕ್ರೀಡಾಪಟುಗಳು ಮಾದಕ ವಸ್ತು ಸೇವಿಸಿದ್ದಾರೆಯೇ ಎಂಬುದನ್ನು ಪತ್ತೆ ಮಾಡಲು ಈಗಿರುವ ಪದ್ಧತಿಗಿಂತ 1,000 ಪಟ್ಟು ಹೆಚ್ಚಿನ ಸೂಕ್ಷ್ಮ ಸಂವೇದಿಯನ್ನು ಹೊಂದಿರುವ ನೂತನ ಡೋಪಿಂಗ್ ಪರೀಕ್ಷೆಯನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರಂತೆ.
'ವ್ಯಕ್ತಿಯೊಬ್ಬ ಎಷ್ಟು ಪ್ರಮಾಣದ ಮಾದಕ ವಸ್ತು ಸೇವಿಸಿದ್ದಾನೆ ಮತ್ತು ಎಷ್ಟು ದೀರ್ಘ ಕಾಲ ಆತ ಸೇವಿಸಿದ್ದಾನೆ ಎಂಬ ಎಲ್ಲ ವಿವರಗಳನ್ನು ನೀಡುವ ಹೊಸ ಪದ್ಧತಿಇದಾಗಿದೆ' ಎಂದು ಅರ್ಲಿಂಗ್ಟನ್‌ಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಡೇನಿಯಲ್ ಆರ್ಮ್‌ಸ್ಟ್ರಾಂಗ್ ಅವರು ತಿಳಿಸಿದರು.
'ಸೂಕ್ಷ್ಮ ಸಂವೇದಿ ಡೋಪಿಂಗ್ ಪರೀಕ್ಷೆ ಮಾಡುವುದು ಹೇಗೆ ಎಂಬುದನ್ನು ಕಂಡುಹಿಡಿಯುವುದು ನಮ್ಮ ಉದ್ದೇಶವಾಗಿತ್ತು. ಈಗ ನಾವು ವಿಶ್ವದಲ್ಲೇ ಮುಂದುವರಿದ ಡೋಪಿಂಗ್ ಪರೀಕ್ಷೆಯ ಮಾದರಿಯನ್ನು ಕಂಡುಹಿಡಿದಿದ್ದೇವೆ ಎನಿಸುತ್ತಿದೆ' ಎಂದಿದ್ದಾರೆ. ನೂತನ ಡೋಪಿಂಗ್ ಪರೀಕ್ಷಾ ಪದ್ಧತಿ ಸಾಮಾನ್ಯವಾಗಿ ಮಾಡುವ ಪರೀಕ್ಷೆಗಿಂತ ಕೊಂಚ ಭಿನ್ನವಾಗಿದ್ದು, ಇದನ್ನು ಮಾಸ್ ಸ್ಪೆಕ್ಟ್ರಾಮೆಟ್ರಿ (ಎಂಎಸ್) ಎಂದು ಕರೆಯಲಾಗುತ್ತಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ, ಅಮೆರಿಕ ಡೋಪಿಂಗ್ ನಿಗ್ರಹ ಸಂಸ್ಥೆ ಸೇರಿದಂತೆ ಇತರ ಸಂಸ್ಥೆಗಳು, ಅಥ್ಲೀಟ್‌ಗಳು ಡೋಪಿಂಗ್ ಸೇವನೆ ಮಾಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಪದ್ಧತಿಯನ್ನು ಅಳವಡಿಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ಆರ್ಮಸ್ಟ್ರಾಂಗ್. ಈ ಹೊಸ ಪದ್ಧತಿ ವ್ಯಕ್ತಿಯಬ್ಬ ಸೇವಿಸಿದ ಡೋಪಿಂಗ್ ಮಾದಕ ವಸ್ತುಗಳಲ್ಲಿನ ಅಂಶಗಳನ್ನು ಪತ್ತೆ ಮಾಡಲು ವೈದ್ಯರಿಗೆ ನೆರವಾಗಲಿದೆಯಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement