ಯುಎಇಗೆ ಐರ್ಲೆಂಡ್ ಕಡಿವಾಣ
ಸೈಲ್ಹೆಟ್: ಐರ್ಲೆಂಡ್ ಬೌಲರ್ಗಳ ನಿಖರ ದಾಳಿಯ ಮುಂದೆ ರನ್ಗಳಿಸಲು ಪರದಾಡಿದ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡದ ಆಟಗಾರರು ವಿಶ್ವಕಪ್ ಟಿ-20 ಕ್ರಿಕೆಟ್ ಟೂರ್ನಿಯ ಅರ್ಹತಾ ಸುತ್ತಿನ ತಮ್ಮ ಎರಡನೇ ಪಂದ್ಯದಲ್ಲಿ ಸಾಧಾರಣ ಮೊತ್ತ ಸಂಪಾದಿಸಿದ್ದಾರೆ.
ಬುಧವಾರ ಇಲ್ಲಿ ಆರಂಭವಾದ 'ಬಿ' ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಐರ್ಲೆಂಡ್ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಯುನೈಟೆಡ್ ಅರಬ್ ಎಮಿರೇಟ್ಸ್ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 123 ರನ್ಗಳಿಸಿತು.
ಯುಎಇ ತಂಡದ ಪರ ಶೈಮಾನ್ ಅನ್ವರ್ 28 ಎಸೆತಗಳಲ್ಲಿ 2 ಸಿಕ್ಸರ್ ಸೇರಿದಂತೆ 30 ರನ್ಗಳಿಸಿದ್ದು ವೈಯಕ್ತಿಕ ಗರಿಷ್ಠ ಮೊತ್ತವಾಯಿತು. ಉಳಿದಂತೆ ಆರಂಭಿಕ ಅಮ್ಜಾದ್ ಅಲಿ (20), ಅಮ್ಜಾದ್ ಜಾವೇದ್ (19) ಮತ್ತು ನಾಯಕ ಖುರ್ರಂ ಖಾನ್ (16) ಅಲ್ಪ ಸ್ವಲ್ಪ ರನ್ಗಳ ಕಾಣಿಕೆ ನೀಡಿದರು.
ಪ್ರಮುಖವಾಗಿ ಅನ್ವರ್ ಮತ್ತು ಅಲಿ ಉತ್ತಮ ಹೊಡೆತಗಳನ್ನು ಬಾರಿಸಿ ರನ್ ವೇಗ ಹೆಚ್ಚಿಸಲು ಪ್ರಯತ್ನ ಮಾಡಿದರು. ಆದರೂ ಸಹ ಇತರೆ ದಾಂಡಿಗರ ವೈಫಲ್ಯದಿಂದಾಗಿ ತಂಡಕ್ಕೆ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ.
ಐರ್ಲೆಂಡ್ ಬೌಲರ್ಗಳ ಪೈಕಿ ಕೆವಿನ್ ಓಬ್ರಿಯಾನ್ ಮತ್ತು ಪಾಲ್ ಸ್ಟಿರ್ಲಿಂಗ್ ತಲಾ 2 ವಿಕೆಟ್ ಕಬಳಿಸಿದರು. ಆಲ್ರೌಂಡರ್ ಓಬ್ರಿಯಾನ್ ಮತ್ತು ಸ್ಟಿರ್ಲಿಂಗ್ ಕರಾರುವಾಕ್ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಎದುರಾಳಿ ದಾಂಡಿಗರಿಗೆ ಸ್ಫೋಟಿಸಲು ಅವಕಾಶ ನೀಡಲಿಲ್ಲ.
ಮೊದಲ ಪಂದ್ಯದಲ್ಲಿ ಜಿಂಬಾಬ್ವೆಗೆ ಸೋಲುಣಿಸಿ ಶುಭಾರಂಭ ಮಾಡಿರುವ ಐರ್ಲೆಂಡ್ ಆಟಗಾರರು ಈ ಪಂದ್ಯವನ್ನು ಗೆದ್ದುಕೊಂಡಲ್ಲಿ ಸೂಪರ್-10ರ ಹೊಸ್ತಿಲಿಗೆ ಬಂದು ನಿಲ್ಲಲಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಯುಎಇ 20 ಓವರುಗಳಲ್ಲಿ 6 ವಿಕೆಟ್ಗೆ 123 (ಶೈಮಾನ್ ಅನ್ವರ್ 30, ಅಮ್ಜಾದ್ ಅಲಿ 20, ಅಮ್ಜಾದ್ ಜಾವೇದ್ 19, ಖುರ್ರಂ ಖಾನ್ 16, ಕೆವಿನ್ ಓಬ್ರಿಯಾನ್ 17ಕ್ಕೆ2, ಪಾಲ್ ಸ್ಟಿರ್ಲಿಂಗ್ 12ಕ್ಕೆ2, ಟಿಮ್ ಮುರ್ತಾಗ್ 20ಕ್ಕೆ1).