ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೆಮೀಸ್‌ಗೆ ಮಧ್ಯಪ್ರದೇಶ- ಒಡಿಶಾ

Vishwanath S
Updated On : 21 Mar 2014, 12:48 pm

ಮೈಸೂರು: ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಮಧ್ಯಪ್ರದೇಶ ಹಾಗೂ ಒಡಿಶಾ ತಂಡಗಳು ಕಿರಿಯ ಮಹಿಳೆಯರ 4ನೇ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಎ ವಿಭಾಗದಲ್ಲಿ ಸೆಮಿ ಫೈನಲ್ ಪ್ರವೇಶಿಸಿವೆ.
ಹಾಕಿ ಕರ್ನಾಟಕ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಪಂದ್ಯಾವಳಿಯಲ್ಲಿ ಗುರುವಾರ ಮಧ್ಯಪ್ರದೇಶ ತಂಡವು ಭೂಪಾಲ್ ತಂಡವನ್ನು 4-0 ಅಂತರದಿಂದಲೂ, ಒಡಿಶಾ ತಂಡವು ಮುಂಬೈಯನ್ನು 4-0 ಅಂತರದಿಂದಲೂ ಪರಾಭವಗೊಳಿಸಿ ಸೆಮಿ ಫೈನಲ್ ಪ್ರವೇಶಿಸಿದರೆ, ಕರ್ನಾಟಕ ತಂಡವು ದೆಹಲಿಯನ್ನು 6-2 ಅಂತರದಿಂದ ಮಣಿಸಿ ಎ ವಿಭಾಗದಲ್ಲಿನ ಸ್ಥಾನ ಭದ್ರಪಡಿಸಿಕೊಂಡಿತು.  ದಿನದ ಮೊದಲ ಪಂದ್ಯದಲ್ಲಿ ಮಧ್ಯಪ್ರದೇಶವು ಭೂಪಾಲ್ ತಂಡವನ್ನು 4-0 ಅಂತರದಿಂದ ಮಣಿಸಿತು. ಮಧ್ಯಪ್ರದೇಶ ತಂಡದ ರಾಖಿ ಪ್ರಜಾಪತಿ, ನಾಯಕಿ ಪ್ರಿಯಾಂಕ ವಾಂಖೆಡೆ, ಟಿ.ಎಚ್. ಸುಮನ್ ದೇವಿ ಮತ್ತು ಪ್ರೀತಿ ದುಬೆ ತಲಾ ಒಂದೊಂದು ಗೋಲು ಬಾರಿಸಿ, ತಂಡದಲ್ಲಿ ಪಾರುಪತ್ಯ ಮೆರೆದರು. ಭೂಪಾಲ್ ತಂಡಕ್ಕೆ ಒಂದು ಗೋಲು ಬಾರಿಸಲೂ ಅವಕಾಶ ನೀಡಿದ ಮಧ್ಯಪ್ರದೇಶ ತಂಡದ ಆಟಗಾರ್ತಿಯರು ಪಂದ್ಯದ ಮೊದಲಾರ್ಧದಲ್ಲಿ 3-0 ಮತ್ತು ದ್ವಿತೀಯಾರ್ಧದಲ್ಲಿ 4-0 ಅಂತರ ಕಾಯ್ದುಕೊಂಡರು.
ದಿನದ ಎರಡನೇ ಪಂದ್ಯದಲ್ಲಿ ಕರ್ನಾಟಕ ತಂಡವು ದೆಹಲಿ ತಂಡವನ್ನು 6-2 ಅಂತರದಿಂದ ಸೋಲಿಸಿತು. ಕರ್ನಾಟಕದ ನಾಯಕಿ ಎಚ್.ಪಿ. ಸಂಧ್ಯಾ ಸೇರಿ ಆರು ಮಂದಿ ಆಟಗಾರ್ತಿಯರು ತಲಾ ಒಂದೊಂದು ಗೋಲು ಬಾರಿಸಿದರು. ಒಟ್ಟು ಐದು ಪೆನಾಲ್ಟಿ ಕಾರ್ನರ್‌ನ ಅವಕಾಶ ಪಡೆದ ಕರ್ನಾಟಕ ತಂಡ ಕೇವಲ ಮೂರು ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸಿದರು. ಪಂದ್ಯದ 19ನೇ ನಿಮಿಷದವರೆಗೂ ಒಂದೂ ಗೋಲು ಸಹ ಉಭಯ ತಂಡಗಳಿಂದ ದಾಖಲಾಗಿರಲಿಲ್ಲ. ಸಿ.ಜಿ. ಸುಷ್ಮಾ ಮೊದಲ ಗೋಲು ಬಾರಿಸಿ ತಂಡದ ಖಾತೆ ತೆರೆದರು.
ಎರಡು ತಂಡದ ಆಟಗಾರ್ತಿಯರು ಪ್ರಬಲ ಪ್ರತಿರೋಧ ಒಡ್ಡಿದರು. ಕರ್ನಾಟಕದ ಗೋಲು ಕೀಪರ್ ನಿಶಾ ಮತ್ತು ಫೀಲ್‌ಡಿಂಗ್‌ನಲ್ಲಿ ಸಿ.ಎಂ. ಭಾಗ್ಯಶ್ರೀ ಉತ್ತಮ ಪ್ರದರ್ಶನ ನೀಡಿದರು. ನಾಯಕಿ ಸಂಧ್ಯಾ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಈ ನಡುವೆ ದೆಹಲಿಯ ಮನಿಶಾ ವೆರ್ಮ ತೀರ ಸುಲಭವಾಗಿ ಎರಡು ಗೋಲು ದಾಖಲಿಸಿದರು. 3, 4 ಮತ್ತು 6ನೇ ಪೆನಾಲ್ಟಿ ಕಾರ್ನರ್‌ಗಳು ಗೋಲುಗಳಾಯಿತು. ಪಂದ್ಯದ ಮೊದಲಾರ್ಧದಲ್ಲಿ 4-1, ದ್ವಿತೀಯಾರ್ಧದಲ್ಲಿ 6-2 ಅಂತರ ಕಾಯ್ದುಕೊಳ್ಳಲಾಯಿತು.
ದಿನದ ಮೂರನೇ ಪಂದ್ಯದಲ್ಲಿ ಪಂಜಾಬ್, ಬಿಹಾರ ತಂಡವನ್ನು 8-0 ಅಂತರದಲ್ಲಿ ಮಣಿಸಿತು. ಪಂಜಾಬ್ ನಾಯಕಿ ರಾಜ್‌ಬೀರ್ ಕೌರ್ ಮೂರು ಗೋಲು ಬಾರಿಸಿದರು. ರುಚಿ ಬಟ್ಟ, ಸಂದೀಪ್ ಕೌರ್, ಪರಮ್‌ಜೀತ್ ಕೌರ್, ರಂಜನ ಮತ್ತು ರಾಜ್‌ವಿಂಡರ್ ತಲಾ ಒಂದೊಂದು ಗೋಲು ಬಾರಿಸಿದರು.
ನಾಲ್ಕನೆ ಪಂದ್ಯದಲ್ಲಿ ಒಡಿಶಾ ತಂಡವು, ಮುಂಬೈ ತಂಡವನ್ನು 4-0 ಅಂತರದಿಂದ ಪರಾಭವಗೊಳಿಸಿ ಸಮೀಸ್ ಪ್ರವೇಶಿಸಿತು. ಒಡಿಶಾ ತಂಡದ ಸರೋಜಿನಿ ಎಕ್ಕ 2 ಗೋಲು, ಎಲಿಮ ಮಿಂಜ್ ಮತ್ತು ಡೊಮ್ನಿಕ ಕುಜೂರ್ ತಲಾ ಒಂದು ಗೋಲು ಬಾರಿಸಿದರು.
ಪಂದ್ಯ ಇಪ್ಪತ್ತೊಂದು- ಭೂಪಾಲ್ ಪರಾಭವಗೊಳಿಸಿದ ಮಧ್ಯಪ್ರದೇಶ 4-0

ಮಧ್ಯಪ್ರದೇಶ ಗೋಲು ಸ್ಕೋರ್
ರಕ್ಷಿ ಪ್ರಜಾಪತಿ- 9ನಿ.
ಪ್ರಿಯಾಂಕ ವಾಂಖೆಡೆ- 20ನಿ.
ಟಿ.ಎಚ್. ಸುಮನ್ ದೇವಿ- 21ನಿ.
ಪ್ರೀತಿ ದುಬೆ- 69ನಿ.
ಪಂದ್ಯ ಇಪ್ಪತ್ತೆರಡು- ದೆಹಲಿ ಮಣಿಸಿದ ಕರ್ನಾಟಕ 6-2
ಕರ್ನಾಟಕ ಗೋಲು ಸ್ಕೋರ್
ಸಿ.ಜಿ. ಸುಷ್ಮ- 19ನಿ.
ಎಸ್.ಪಿ. ಭವ್ಯ- 25ನಿ.
ಬಿ.ಎಂ. ಕೋಮಲ- 27ನಿ.
ನಿಹಾ- 32ನಿ.
ಎಚ್.ಪಿ. ಸಂಧ್ಯಾ- 46ನಿ.
ಸಿ.ಎಂ. ಭಾಗ್ಯಶ್ರೀ- 56ನಿ.
ದೆಹಲಿ ಗೋಲು ಸ್ಕೋರ್
ಮನಿಶ ವರ್ಮ- 23, 38ನಿ.
ಪಂದ್ಯ ಇಪ್ಪತ್ಮೂರು- ಬಿಹಾರ ಮಣಿಸಿದ ಪಂಜಾಬ್ 8-0
ಪಂಜಾಬಬ್ಗೋಲ್ ಸ್ಕೋರ್
ರುಚಿ ಬಟ್ಟ- 2ನಿ.
ಸಂದೀಪ್ ಕೌರ್- 4ನಿ.
ರಾಜ್‌ಬೀರ್ ಕೌರ್- 9, 13, 33ನಿ.
ಪರಮ್‌ಜೀತ್ ಕೌರ್- 22ನಿ.
ರಂಜನ- 28ನಿ.
ರಾಜ್‌ವಿಂದರ್- 41ನಿ.
ಪಂದ್ಯ ಇಪತ್ನಾಲ್ಕು- ಮುಂಬೈ ಮಣಿಸಿದ ಒಡಿಶಾ 4-0
ಒಡಿಶಾ ಗೋಲು ಸ್ಕೋರ್
ಎಲಿಮ ಮಿಂಜ್- 26ನಿ.
ಸರೋಜಿನಿ ಎಕ್ಕ- 34, 63ನಿ.
ಡೊಮ್ನಿಕ ಕುಜೂರ್- 45ನಿ.


-ಡಿ.ಎನ್. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement