ಭಾರತ ಮಹಿಳೆಯರಿಗೆ ಗೆಲವು
ಸಾವರ್ (ಬಾಂಗ್ಲಾದೇಶ): ಭಾರತದ ವನಿತೆಯರು ಐಸಿಸಿ ಟಿ-20 ವಿಶ್ವಕಪ್ ಮಹಿಳಾ ಕ್ರಿಕೆಟ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 26 ರನ್ಗಳಿಂದ ಜಯಗಳಿಸಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಭಾರತ 4 ವಿಕೆಟ್ ನಷ್ಟಕ್ಕೆ 148 ರನ್ಗಳಿಸಿತು. ಪೂನಂ ರೌತ್ 40 ಎಸೆತಗಳಲ್ಲಿ 7 ಬೌಂಡರಿಗಳಿದ್ದ ಅಜೇಯ 50 ರನ್ ಸಿಡಿಸಿದರೆ, ನಾಯಕಿ ಮಿಥಾಲಿ ರಾಜ್ 34 ಎಸೆತಗಳಲ್ಲಿ 7 ಬೌಂಡರಿ ಹೊಂದಿದ್ದ 42 ರನ್ ಮಾಡಿದರು.
ಉತ್ತರವಾಗಿ ಐರ್ಲೆಂಡ್ 9 ವಿಕೆಟ್ ನಷ್ಟಕ್ಕೆ 122 ರನ್ಗಳಿಸಲಷ್ಟೇ ಶಕ್ತವಾಯಿತು. ಐರ್ಲೆಂಡ್ ಪರ ಆರಂಭಿಕ ಆಟಗಾರ್ತಿ ಕ್ಲಾರೆ ಶಿಲಿಂಗ್ಟಾನ್ 43 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಒಳಗೊಂಡ 47 ರನ್ಗಳಿಸಿದ್ದು ವ್ಯರ್ಥವಾಯಿತು.
ಭಾರತದ ಬೌಲಿಂಗ್ನಲ್ಲಿ ಗಮನ ಸೆಳೆದ ಶಿಖಾ ಪಾಂಡೆ 3 ಮತ್ತು ಸೋನಿಯಾ ದಾಬಿರ್ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಭಾರತ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿದ್ದರು.
ಸಂಕ್ಷಿಪ್ತ ಸ್ಕೋರ್
ಭಾರತ 20 ಓವರುಗಳಲ್ಲಿ 4 ವಿಕೆಟ್ಗೆ 148 (ಪೂನಂ ರೌತ್ 50, ಮಿಥಾಲಿ ರಾಜ್ 42, ಎಲೆನಾ ಟೈಸಿ 24ಕ್ಕೆ1).
ಐರ್ಲೆಂಡ್ 20 ಓವರುಗಳಲ್ಲಿ 9 ವಿಕೆಟ್ಗೆ 122 (ಕ್ಲಾರೆ ಶಿಲಿಂಗ್ಟಾನ್ 47, ಶಿಖಾ ಪಾಂಡೆ 24ಕ್ಕೆ3, ಸೋನಿಯಾ ದಾಬಿರ್ 20ಕ್ಕೆ2).