ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸಾನಿಯಾ-ಕಾರಾ ಶುಭಾರಂಭ

Vishwanath S
Updated On : 22 Mar 2014, 1:00 am

ಮಿಯಾಮಿ (ಅಮೆರಿಕ): ಭಾರತದ ಸಾನಿಯಾ ಮಿರ್ಜಾ ಮತ್ತು ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಮಿಯಾಮಿಯಲ್ಲಿ ನಡೆಯುತ್ತಿರುವ ಸೋನಿ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್‌ನಲ್ಲಿ ಎರಡನೇ ಸುತ್ತು ತಲುಪುವ ಮೂಲಕ ಶುಭಾರಂಭ ಮಾಡಿದ್ದಾರೆ.
ಆದರೆ, ಭಾರತದ ಮತ್ತೊಬ್ಬ ಆಟಗಾರ ಲಿಯಾಂಡರ್ ಪೇಸ್ ಮಾತ್ರ ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಮುಖಾಬಲದಲ್ಲಿಯೇ ಸೋಲನುಭವಿಸಿ ಭಾರಿ ನಿರಾಸೆಗೊಳಗಾಗಿದ್ದಾರೆ.
ಐದನೇ ಶ್ರೇಯಾಂಕದ ಗೌರವ ಹೊಂದಿರುವ ಸಾನಿಯಾ-ಕಾರಾ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೇಯಾಂಕರಹಿತ ತೈಪೆ ಜೋಡಿ ಹಾವೊ-ಚಿಂಗ್ ಚಾನ್ ಮತ್ತು ಯಂಗ್-ಜಾನ್ ಚಾನ್ ಅವರನ್ನು 6-3, 6-7 (8-10), 10-8 ಸೆಟ್‌ಗಳಿಂದ ಸೋಲಿಸಿದರು.
ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತ-ಜಿಂಬಾಬ್ವೆ ಜೋಡಿ, ಜಾರ್ಜಿಯಾದ ಓಕ್ಸಾನಾ ಕಲಾಶನಿಕೊವಾ ಮತ್ತು ರಷ್ಯಾದ ಅಲಿಸಾ ಕ್ಲೇಬಾನೊವಾ ಅವರನ್ನು ಎದುರಿಸಲಿದೆ.
ಈ ಮಧ್ಯೆ, ಪುರುಷರ ಡಬಲ್ಸ್ ವಿಭಾಗದಲ್ಲಿ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಜೋಡಿ ಅವರೊಂದಿಗೆ ಸ್ಪರ್ಧೆಗಿಳಿದಿದ್ದ ಲಿಯಾಂಡರ್ ಪೇಸ್ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಎರಿಕ್ ಬಟೊರ್ಯಾಕ್ ಮತ್ತು ರವೀನ್ ಕ್ಲಾಸೆನ್ ಎದುರು 3-6, 6-7 (7-9)ರಿಂದ ಸೋಲನುಭವಿಸಿದರು.
ನಾಲ್ಕನೇ ಶ್ರೇಯಾಂಕಿತ ಜೋಡಿಯಾಗಿದ್ದ ಪೇಸ್-ಸ್ಟೆಪಾನೆಕ್ ಎರಡೂ ಸೆಟ್‌ಗಳಲ್ಲಿ ಉತ್ತಮ ಹೋರಾಟ ನೀಡಿದರೂ ಸಹ ಗೆಲ್ಲುವ ಅದೃಷ್ಟವಿಲ್ಲದೆ ಮೊದಲ ಹೆಜ್ಜೆಯಲ್ಲೇ ಮುಗ್ಗರಿಸಿದ ಭಾರಿ ಆಘಾತದೊಂದಿಗೆ ಅಂಗಣ ತೊರೆಯಬೇಕಾಯಿತು.
ಇದೇ ವಿಭಾಗದಲ್ಲಿ ಪಾಲ್ಗೊಂಡಿರುವ ಭಾರತದ ಮತ್ತಿಬ್ಬರು ಆಟಗಾರರಾ ರೋಹನ್ ಬೋಪಣ್ಣ,  ಪಾಕಿಸ್ತಾನದ ಐಸಾಮುಲ್-ಹಕ್ ಖುರೇಷಿ ಜೊತೆಗೂಡಿ ಹಾಗೂ ಕೆವಿನ್ ಆ್ಯಂಡರ್ಸನ್ ಜೊತೆಗೂಡಿ ಮಹೇಶ್ ಭೂಪತಿ ಸೆಣಸಲಿದ್ದಾರೆ.
ಸೆರೆನಾ-ಅನಾ ಶುಭಾರಂಭ
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಆರು ಬಾರಿಯ ಚಾಂಪಿಯನ್ ಅಗ್ರಶ್ರೇಯಾಂಕಿತೆ ಅಮೆರಿಕದ ಸೆರೆನಾ ವಿಲಿಯಮ್ಸ್ 7-6 (9-7), 6-2 ಸೆಟ್‌ಗಳಿಂದ ಯರೊಸ್ಲೊನಾ ಶ್ವೆಡೊವಾ ಅವರನ್ನು ಹಾಗೂ ಅನಾ ಇವಾನೊವಿಚ್ 6-1, 6-1ರಿಂದ ಅಮೆರಿಕದ ಲಾರೆನ್ ಡೇವಿಸ್‌ರನ್ನು ಮಣಿಸಿ ಎರಡನೇ ಸುತ್ತಿಗೆ ಹೆಜ್ಜೆ ಹಾಕಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement