ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫುಟ್ಬಾಲ್ ಆಟಗಾರ ಬೆಲ್ಲಿನಿ ನಿಧನ

Mainashree
Updated On : 22 Mar 2014, 11:44 am

ಸಾವ್ ಪೌಲೊ: ಬ್ರೆಜಿಲ್ ಫುಟ್ಬಾಲ್ ತಂಡ ಮೊದಲ ಬಾರಿಗೆ 1958ರಲ್ಲಿ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಾಗ ತಂಡದ ಸಾರಥ್ಯ ವಹಿಸಿದ್ದ ಹಿಲ್ಡೆರಾಲ್ಡೊ ಲೂಯಿಜ್ ಬೆಲ್ಲಿನಿ ನಿಧನರಾಗಿದ್ದಾರೆ.
83 ವರ್ಷದ ಬೆಲ್ಲಿನಿ ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು, ಶನಿವಾರ ಮೃತಪಟ್ಟಿದ್ದಾರೆ.
ಬೆಲ್ಲಿನಿ ಖ್ಯಾತ ಆಟಗಾರರಾದ ಗ್ಯಾಂಚಾ, ಮಾರಿಯೊ ಜಾಗಲ್ಲೊ ಅವರನ್ನು ಮುನ್ನಡೆಸಿದ್ದು, ಪೀಲೆ 17 ವರ್ಷವಿದ್ದಾಗ ಇವರ ನಾಯಕತ್ವದಲ್ಲಿ ಆಡಿದ್ದರು.
ಬೆಲ್ಲಿನಿ 1966ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ತಮ್ಮ ಕಡೇಯ ಪಂದ್ಯವನ್ನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement