ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಶಿಲ್ಲಾಂಗ್‌ಗೆ ಬಿಎಫ್‌ಸಿ ಸಡ್ಡು

Mainashree
Updated On : 22 Mar 2014, 11:45 am

ಶಿಲ್ಲಾಂಗ್: ಐ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬೆಂಗಳೂರು ಎಫ್‌ಸಿ, 20ನೇ ಸುತ್ತಿನ ಪಂದ್ಯದಲ್ಲಿ ಶಿಲ್ಲಾಂಗ್ ಲಾಜೊಂಗ್ ತಂಡಕ್ಕೆ ಸವಾಲು ನೀಡಲು ಸಿದ್ಧವಾಗಿದೆ.
ಭಾನುವಾರ ಇಲ್ಲಿನ ಜೆ.ಎನ್‌ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಿಎಫ್‌ಸಿ ತಂಡ, ಆತಿಥೇಯರನ್ನು ಮಣಿಸುವ ಮೂಲಕ ಗೆಲವಿನ ಹಾದಿಯಲ್ಲಿ ಸಾಗಲು ಸಜ್ಜಾಗಿದೆ.
ಶಿಲ್ಲಾಂಗ್ ತಂಡ ಕಳೆದ ಮೂರು ತಿಂಗಳಿನಿಂದ ತವರಿನ ಅಂಗಣದಲ್ಲಿ ಪಂದ್ಯವನ್ನಾಡಿಲ್ಲ. ಹಾಗಾಗಿ ಈ ಪಂದ್ಯ ಶಿಲ್ಲಾಂಗ್ ಪಾಲಿಗೆ ಮಹತ್ವದ್ದಾಗಿದೆ. ಐದನೇ ಸ್ಥಾನದಲ್ಲಿರುವ ಶಿಲ್ಲಾಂಗ್ ತಂಡಕ್ಕೆ ಅಭಿಮಾನಿಗಳ ಬೆಂಬಲ ಸಿಗಲಿದೆ.  ಇನ್ನು ಬಿಎಫ್‌ಸಿ ತಂಡ ಇದೇ ಮೊದಲ ಬಾರಿಗೆ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದರೂ, ತನ್ನ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದೆ. ಅಲ್ಲದೆ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಳ್ಳಲು ಆ್ಯಶ್ಲೆ ವೆಸ್ಟ್‌ವುಡ್ ತಂಡವನ್ನು ಉತ್ತಮ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ.
ಬಿಎಫ್‌ಸಿ ತಂಡ ಒಟ್ಟು 37 ಅಂಕಗಳನ್ನು ಪಡೆದುಕೊಂಡಿದ್ದರೆ, ಶಿಲ್ಲಾಂಗ್ 26 ಅಂಕಗಳನ್ನು ಪಡೆದುಕೊಂಡಿದೆ.ಬಿಫ್‌ಸಿ ತಂಡದ ಪರ ನಾಯಕ ಸುನಿಲ್ ಛೆಟ್ರಿ ಜತೆಗೆ ರಾಬಿನ್ ಸಿಂಗ್, ಸೀನ್ ರೂನಿ ಉತ್ತಮ ಲಯದಲ್ಲಿರುವುದು ತಂಡದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement