ಶೇ.25 ತೂಕ ಕಳೆದುಕೊಂಡ ಶುಮಿ
ಗ್ರೆನೊಬೆಲ್: ಸ್ಕೀಯಿಂಗ್ ಅಪಘಾತಕ್ಕೆ ಒಳಗಾಗಿ ಕೋಮಾಕ್ಕೆ ಸೇರಿದನಂತರ ಫಾರ್ಮುಲಾ ಒನ್ ಮಾಜಿ ಚಾಲಕ ಮೈಕಲ್ ಶುಮಾಕರ್ ಇದುವರೆಗೂ ಒಟ್ಟು ಶೇ.25ರಷ್ಟು ತೂಕ ಕಳೆದುಕೊಂಡಿದ್ದಾರೆ.
ವೈದ್ಯರು ಶುಮಾಕರ್ ಅವರನ್ನು ಕೋಮಾದಿಂದ ಹೊರ ತರಲು ತಮ್ಮ ಪ್ರಯತ್ನ ಮುಂದುವರಿಸಿದ್ದು, ಶುಮಿ 54ಕ್ಕಿಂತ ಕಡಿಮೆ ತೂಕಕ್ಕೆ ಇಳಿದಿದ್ದಾರೆ. ಸ್ಥಳೀಯ ಪತ್ರಿಕೆಯ ವರದಿ ಪ್ರಕಾರ, ಅಪಘಾತದಲ್ಲಿ ಶುಮಿ ತಲೆ ಬಂಡೆಗೆ ಜೋರಾಗಿ ಹೊಡೆದ ಪರಿಣಾಮ ಮೆದುಳಿಗೆ ತೀವ್ರವಾದ ಪೆಟ್ಟು ಬಿದಿದೆ. ಅಲ್ಲದೆ ಶುಮಿಯ ಸ್ನಾಯುಗಳು ಸಂಕುಚಿತವಾಗುತ್ತಿವೆ. ಅಲ್ಲದೆ ಶುಮಿ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ತಿಳಿಸಲಾಗಿದೆ.