ಸ್ಪಿನ್ನರ್ಗಳೇ ಪ್ರಮುಖ ಅಸ್ತ್ರ
ಮಿರ್ಪುರ: ವೆಸ್ಟ್ ಇಂಡೀಸ್ ಬ್ಯಾಟ್ಸ್ಮನ್ಗಳು ಸ್ಪಿನ್ನರ್ಗಳ ವಿರುದ್ಧ ಕ್ರೀಸ್ಗೆ ಕಚ್ಚಿ ನಿಲ್ಲುವ ಬದಲು, ದೊಡ್ಡ ಹೊಡೆತಗಳನ್ನು ಬಾರಿಸಲು ಮಾತ್ರ ಮುಂದಾಗುತ್ತಾರೆ ಎಂದು ಭಾರತ ತಂಡದ ಬ್ಯಾಟ್ಸ್ಮನ್ ಸುರೇಶ್ ರೈನಾ ಅವರು ಹೇಳಿದ್ದಾರೆ. ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ, ಅಮಿತ್ ಮಿಶ್ರಾ ಅವರನ್ನೊಳಗೊಡ ಭಾರತದ ಸ್ಪಿನ್ ವಿಭಾಗದ ಎದುರು ವಿಂಡೀಸ್ ಬ್ಯಾಟ್ಸ್ಮನ್ಗಳ ಆಟ ನಡೆಯುವುದಿಲ್ಲ ಎಂಬುದೇ ರೈನಾ ಅಭಿಪ್ರಾಯವಾಗಿದೆ. 'ವೆಸ್ಟ್ ಇಂಡೀಸ್ ತುಂಬಾ ಭಿನ್ನವಾದ ತಂಡವಾಗಿದೆ. ಅಲ್ಲದೆ, ಹೆಚ್ಚಿನ ಸ್ಫೋಟಕ ಬ್ಯಾಟ್ಸ್ಮನ್ಗಳನ್ನು ಹೊಂದಿದೆ. ಆದರೆ, ಆ ಎಲ್ಲ ಆಟಗಾರರು ಸಿಕ್ಸರ್ ಬಾರಿಸುವ ಕಲೆಯನ್ನು ಮಾತ್ರ ಹೊಂದಿದ್ದಾರೆ. ಸ್ಪಿನ್ ಬೌಲರ್ ವಿರದ್ಧ ಕ್ರೀಸ್ಗೆ ಕಚ್ಚಿ ನಿಂತುಕೊಂಡು ಆಡುವ ಸಾಮರ್ಥ್ಯವನ್ನೇ ವಿಂಡೀಸ್ ಬ್ಯಾಟ್ಸ್ಮನ್ಗಳು ಹೊಂದಿಲ್ಲ' ಎಂದು ವೆಸ್ಟ್ ಇಂಡೀಸ್ ಆರಂಭಿಕ ಜೋಡಿಯಾದ ಕ್ರಿಸ್ ಗೇಯ್ಲ್ ಮತ್ತು ಡ್ವೈನ್ ಸ್ಮಿತ್ ಅವರ ಉತ್ತಮ ಜತೆಯಾಟದ ಬಗ್ಗೆ ಕೇಳಿದ ಪ್ರಶ್ನೆಗೆ ರೈನಾ ಉತ್ತರಿಸಿದರು. 'ಪಾಕಿಸ್ತಾನದ ವಿರುದ್ಧ ತಕ್ಕ ಬೌಲಿಂಗ್ ಪ್ರದರ್ಶಿಸಿದ ಸ್ಪಿನ್ನರ್ಗಳಾದ ಅಮಿತ್ ಮಿಶ್ರಾ, ರವಿಚಂದ್ರನ್ ಅಶ್ವಿನ್ ಹಾಗೂ ರವಿಂದ್ರ ಜಡೇಜಾ ಅವರು ಫಾರ್ಮ್ನಲ್ಲಿದ್ದಾರೆ ಎಂದರು.