ಕಿವೀಸ್ ಕಕ್ಕಾಬಿಕ್ಕಿ
ಅಂತಿಮ ಓವರಿನಲ್ಲಿ ನ್ಯೂಜಿಲೆಂಡ್‌ಗೆ ಗೆಲ್ಲಲು ಕೇವಲ 7 ರನ್ ಬೇಕಿತ್ತು. ಇನ್ನೂ 5 ವಿಕೆಟ್‌ಗಳು ಕೈಯಲ್ಲಿದ್ದರಿಂದ ಜಯ ಕಷ್ಟವಾಗಿರಲಿಲ್ಲ...
ಚಿತ್ತಗಾಂಗ್: ಅಂತಿಮ ಓವರಿನಲ್ಲಿ ನ್ಯೂಜಿಲೆಂಡ್‌ಗೆ ಗೆಲ್ಲಲು ಕೇವಲ 7 ರನ್ ಬೇಕಿತ್ತು. ಇನ್ನೂ 5 ವಿಕೆಟ್‌ಗಳು ಕೈಯಲ್ಲಿದ್ದರಿಂದ ಜಯ ಕಷ್ಟವಾಗಿರಲಿಲ್ಲ. ಜೊತೆಗೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ರಾಸ್ ಟೇಲರ್ ಕ್ರೀಸ್‌ನಲ್ಲಿದ್ದರಿಂದ ದಕ್ಷಿಣ ಆಫ್ರಿಕಾ ಎದುರು ನ್ಯೂಜಿಲೆಂಡ್ ಸೋಲಬಹುದೆಂದು ಬಹುಶಃ ಯಾರೂ ನಿರೀಕ್ಷಿಸಿರಲಿಲ್ಲ.
ಆದರೂ ದಕ್ಷಿಣ ಆಫ್ರಿಕಾ ಪರ ಕೊನೆಯ ಓವರ್ ಎಸೆಯಲು ಬಂದ ಡೇಲ್ ಸ್ಟೇಯ್ನ್ ಬಗ್ಗೆ ಭಯ ಇದ್ದೇ ಇತ್ತು. ಆಫ್ರಿಕಾ ಕೂಡ ಆತನನ್ನು ಪೂರ್ಣವಾಗಿ ನಂಬಿಕೊಂಡಿತ್ತು. ಅಂತಿಮವಾಗಿ ಸ್ಟೇಯ್ನ್ ತಮ್ಮ ತಂಡದ ನಿರೀಕ್ಷೆ ಹುಸಿಗೊಳಿಸಲಿಲ್ಲ. ಮತ್ತೊಂದೆಡೆ ಕೈಯಲ್ಲಿದ್ದ ಗೆಲವನ್ನು ನ್ಯೂಜಿಲೆಂಡ್ ಕೊನೆಯಲ್ಲಿ ನೆಲಕ್ಕೆ ಹಾಕಿದ್ದು, ಆಶ್ಚರ್ಯವಾಯಿತು.
ಸ್ಟೇಯ್ನ್ ಎಸೆದ ಇನಿಂಗ್ಸ್‌ನ ಅಂತಿಮ ಓವರಿನಲ್ಲಿ ನ್ಯೂಜಿಲೆಂಡ್ ಕೇವಲ ಒಂದು ಬೌಂಡರಿ ಗಳಿಸಿ ಮೂರು ವಿಕೆಟ್ ಕಳೆದುಕೊಂಡಿತು. ಲೂಕ್ ರಾಂಚಿ ಮತ್ತು ನಾಥನ್ ಮೆಕಲಂ ಕ್ಯಾಚ್ ನೀಡಿ ಔಟಾದರೆ, ಅಂತಿಮ ಎಸೆತದಲ್ಲಿ ಕನಿಷ್ಠ 2 ರನ್‌ಗಳಿಸಿದರೂ ಪಂದ್ಯ ಟೈ ಆಗುವ ಹಂತದಲ್ಲಿ ಟೇಲರ್ ಒಂದೂ ರನ್ ಪೂರೈಸಲಾಗದೇ ರನೌಟ್ ಬಲೆಗೆ ಬಿದ್ದರು.
ಸೋಮವಾರ ಚಿತ್ತಗಾಂಗ್‌ನಲ್ಲಿ ಗುಂಪು-1ರ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅಂತಿಮವಾಗಿ 2 ರನ್‌ಗಳಿಂದ ಗೆಲವಿನ ಕೇಕೆ ಹಾಕಿತು. ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲುಂಡಿದ್ದ ಆಫ್ರಿಕಾ, ಈ ಪಂದ್ಯದ ಮೂಲಕ ಗೆಲವಿನ ಹಾದಿಗೆ ಮರಳಿ ಮುಂದಿನ ಸುತ್ತು ಪ್ರವೇಶಿಸುವ ಆಸೆ ಹೆಚ್ಚಿಸಿಕೊಂಡಿತು. ಗೆಲ್ಲಲು 171 ರನ್‌ಗಳ ಗುರಿ ಬೆಂಬತ್ತಿದ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 168 ರನ್‌ಗಳಿಸಿ ಗೆಲವಿನ ಹೊಸ್ತಿಲಲ್ಲಿ ಮುಗ್ಗರಿಸಿದಂತಾಯಿತು. ನ್ಯೂಜಿಲೆಂಡ್ ಪರ ಉತ್ತಮ ಹೋರಾಟ ಸಂಘಟಿಸಿ ಗೆಲವಿನ ಆಸೆ ಚಿಗುರಿಸಿದ್ದ ರಾಸ್ ಟೇಲರ್ (62ರನ್, 37 ಎಸೆತ, 4 ಬೌಂಡರಿ, 3 ಸಿಕ್ಸರ್) ಮತ್ತು ಕೇನ್ ವಿಲಿಯಮ್ಸನ್ (51ರನ್, 35 ಎಸೆತ, 5 ಬೌಂಡರಿ, 2 ಸಿಕ್ಸರ್) ಪ್ರಯತ್ನ ಅಂತಿಮ ಓವರಿನಲ್ಲಿ ವ್ಯರ್ಥಗೊಳ್ಳುವಂತಾಯಿತು. ಆಫ್ರಿಕಾ ಗೆಲವಿನ ಹೀರೊ ಸ್ಟೇಯ್ನ್ 4 ವಿಕೆಟ್ ಪಡೆದು ಗಮನ ಸೆಳೆದರು.
ಅಬ್ಬರಿಸಿದ ಡುಮಿನಿ, ಆಫ್ರಿಕಾ ಉತ್ತಮ ಮೊತ್ತ: ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 170 ರನ್‌ಗಳ ಉತ್ತಮ ಮೊತ್ತ ಸಂಪಾದಿಸಿತು.
ಐದನೇ ಕ್ರಮಾಂಕದಲ್ಲಿ ಆಡಲಿಳಿದ ಜೀನ್-ಪಾಲ್ ಡುಮಿನಿ ಕೇವಲ 43 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ ಅಜೇಯ 86 ರನ್ ಸಿಡಿಸಿದರು. ಉಳಿದಂತಕೆ ಆರಂಭಿಕ ಹಶೀಂ ಆಮ್ಲಾ 40 ಎಸೆತಗಳಲ್ಲಿ 2 ಬೌಂಡರಿಗಳಿದ್ದ 41 ರನ್‌ಗಳಿಸಿ ತಂಡಕ್ಕೆ ನೆರವಾದರು. ಒಂದು ಹಂತದಲ್ಲಿ ಆಫ್ರಿಕಾದ ಸ್ಥಿತಿ ಶೋಚನೀಯವಾಗಿತ್ತು. 6.4 ಓವರುಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಮಧ್ಯಮ ಹಂತದಲ್ಲಿ ರೌದ್ರಾವತಾರ ಬ್ಯಾಟಿಂಗ್ ಪ್ರದರ್ಶನ ನೀಡಿದ ಡುಮಿನಿ, ರನ್ ಮಳೆಯನ್ನೇ ಸುರಿಸಿದರು. ನ್ಯೂಜಿಲೆಂಡ್‌ನ ಪ್ರತಿಯೊಬ್ಬ ದಾಳಿಕಾರನನ್ನು ಕಠಿಣವಾಗಿ ಶಿಕ್ಷಿಸಿದ ಈ ಎಡಗೈ ಬ್ಯಾಟ್ಸ್‌ಮನ್ ಮೊತ್ತದ ರನ್ ಗತಿಯನ್ನೂ ಹೆಚ್ಚಿಸಿದರು. ಅಚ್ಚರಿ ಎನ್ನುವಂತೆ ಗುಡುಗಿದ ಡುಮಿನಿ 200ರ ಸರಾಸರಿಯಲ್ಲಿ ರನ್ ಸಂಪಾದಿಸಿದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ 20 ಓವರ್‌ಗೆ 6 ವಿಕೆಟ್‌ಗೆ 170
(ಜೀನ್-ಪಾಲ್ ಡುಮಿನಿ ಅಜೇಯ 86, ಹಶೀಂ ಆಮ್ಲಾ 41, ಕೋರೆ ಆ್ಯಂಡರ್ಸನ್ 28ಕ್ಕೆ2, ಟಿಮ್ ಸೌಥಿ 46ಕ್ಕೆ2). ನ್ಯೂಜಿಲೆಂಡ್ 20 ಓವರುಗಳಲ್ಲಿ 8 ವಿಕೆಟ್‌ಗೆ 168 (ರಾಸ್ ಟೇಲರ್ 62, ಕೇನ್ ವಿಲಿಯಮ್ಸನ್ 51, ಮಾರ್ಟಿನ್ ಗುಪ್ಟಿಲ್ 22, ಡೇಲ್ ಸ್ಟೇಯ್ನ್ 17ಕ್ಕೆ4, ಇಮ್ರಾನ್ ತಾಹಿರ್ 27ಕ್ಕೆ2).
ಜೀನ್-ಪಾಲ್
ರನ್ 86ಶ್ರೀ
ಎಸೆತ 43
4್ಗ10
6್ಗ3