ನೆದರ್‌ಲ್ಯಾಂಡ್ಸ್ 39 ದಾಖಲೆ ಪತನ
ಚಿತ್ತಗಾಂಗ್: ದುರ್ಬಲ ನೆದರ್ಲೆಂಡ್ ತಂಡದ ಪರ ಅಬ್ಬರಿಸಿದ ಶ್ರೀಲಂಕಾ ಬೌಲರ್‌ಗಳು ಟಿ20 ವಿಶ್ವಕಪ್‌ನ ಸೂಪರ್ 10 ಹಂತದ ಪಂದ್ಯದಲ್ಲಿ ದಾಖಲೆಯ ಗೆಲವು ದಾಖಲಿಸಿದ್ದಾರೆ.
ಸೋಮವಾರ ಇಲ್ಲಿನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಂಕಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪರಿಣಾಮ ನೆದರ್ಲೆಂಡ್, ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿಯಿತು. ಆ ನಂತರ 10.3 ಓವರ್‌ಗಳಲ್ಲಿ 39 ರನ್ ಕಲೆಹಾಕಿ ಸರ್ವ ಪತನವಾಯಿತು. ಇದು ಟಿ20 ಇತಿಹಾಸದಲ್ಲಿ ತಂಡವೊಂದು ಅಲ್ಪ ಮೊತ್ತಕ್ಕೆ ಕುಸಿದ ದಾಖಲೆಯಾಯಿತು. ನಂತರ ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ 5 ಓವರ್‌ಗಳಲ್ಲಿ 1 ವಿಕೆಟ್‌ಗೆ 40 ರನ್ ಕಲೆಹಾಕಿತು.
ನೆದರ್ಲೆಂಡ್ ತಂಡ 1 ರನ್‌ಗೆ ಆರಂಭಿಕ ಮೂವರ ವಿಕೆಟ್ ಕಳೆದುಕೊಂಡು ಆರಂಭದಲ್ಲೇ ಕುಸಿತ ಕಂಡಿತು. ಆನಂತರ ನಿಗದಿತ ಅಂತರದಲ್ಲಿ ವಿಕೆಟ್ ಕೈಚೆಲ್ಲಿದ ಪರಿಣಾಮ ಅಲ್ಪ ಮೊತ್ತಕ್ಕೆ ನೆದರ್ಲೆಂಡ್ ತಮ್ಮ ಇನಿಂಗ್ಸ್‌ಗೆ ತೆರೆ ಎಳೆದುಕೊಂಡಿತು. ನೆದರ್ಲೆಂಡ್ ಪರ ಟಾಮ್ ಕೂಪರ್(16) ಎರಡಂಕಿ ರನ್ ಗಡಿ ದಾಟಿದ ಏಕೈಕ ಬ್ಯಾಟ್ಸ್‌ಮನ್ ಆದರು. ಐವರು ಬ್ಯಾಟ್ಸ್‌ಮನ್‌ಗಳು ತಮ್ಮ ರನ್ ಖಾತೆ ತೆರೆಯುವಲ್ಲಿ ಯಶಸ್ವಿಯಾಗಲಿಲ್ಲ. ಲಂಕಾ ತಂಡದ ಪರ ಮ್ಯಾಥ್ಯೂಸ್ ಹಾಗೂ ಮೆಂಡಿಸ್ ತಲಾ 3 ವಿಕೆಟ್ ಪಡೆದರೆ, ಮಾಲಿಂಗಾ 2, ಕುಲಸೇಖರ 1 ವಿಕೆಟ್ ಪಡೆದು ಮಿಂಚಿದರು.
ಟಿ20 ಇತಿಹಾಸದ ಕನಿಷ್ಠ ಮೊತ್ತ
ತಂಡ ಮೊತ್ತ ಎದುರಾಳಿ ಸ್ಥಳ ವರ್ಷ
ನೆದರ್ಲೆಂಡ್ 39 ಶ್ರೀಲಂಕಾ ಚಿತ್ತಗಾಂಗ್ 2014
ಕೀನ್ಯಾ 56 ಅಫ್ಘಾನಿಸ್ತಾನ ಶಾರ್ಜಾ 2013
ಕೀನ್ಯಾ 57 ಐರ್ಲೆಂಡ್ ಬೆಲ್‌ಫಾಸ್ಟ್ 2008
ಐರ್ಲೆಂಡ್ 68 ವೆಸ್ಟ್ ಇಂಡೀಸ್ ಪ್ರೊವಿಡೆನ್ಸ್ 2010
ಹಾಂಕಾಂಗ್ 69 ನೇಪಾಳ ಚಿತ್ತಗಾಂಗ್ 2014