ಬಹ್ರೈನ್ ಗ್ರ್ಯಾನ್ ಪ್ರೀಗೆ ಸಚಿನ್
ಬಹ್ರೈನ್: ಮುಂದಿನ ತಿಂಗಳು ನಡೆಯಲಿರುವ ಬಹ್ರೈನ್ ಗ್ರ್ಯಾನ್ ಪ್ರೀ ಫಾರ್ಮುಲಾ ಒನ್ ರೇಸ್ಗೆ ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಡೂಲ್ಕರ್ ಅವರು ಕುಟುಂಬ ಸಮೇತರಾಗಿ ತೆರಳಿ ರೇಸ್ ಅನ್ನು ವೀಕ್ಷಿಸಲಿದ್ದಾರೆ. ಏ.4ರಿಂದ 6ರವರೆಗೆ ನಡೆಯಲಿರುವ ಬಹ್ರೈನ್ ಗ್ರ್ಯಾನ್ ಪ್ರೀ, ರಾತ್ರಿ ವೇಳೆ ನಡೆಯಲಿದೆ. ಹಾಗಾಗಿ ಇದು ಬಹ್ರೈನ್ನ ಮೊಟ್ಟ ಮೊದಲ ರಾತ್ರಿ ರೇಸ್ ಆಗಿದೆ. ಈ ರೇಸ್ಗೆ ಬಹ್ರೈನ್ನ ಯುವರಾಜ ಸಲ್ಮಾನ್ ಬಿನ್ ಹಮದ್ ಅಲ್ ಖಾಲಿಫ್ ಅವರು ಸಚಿನ್ ಕುಟುಂಬಕ್ಕೆ ಆಹ್ವಾನ ನೀಡಿದ್ದಾರೆ. ಈ ಆಹ್ವಾನವನ್ನು ಸಚಿನ್ ಒಪ್ಪಿಕೊಂಡಿದ್ದು, ಕುಟುಂಬ ಸಮೇತರಾಗಿ ಗ್ರ್ಯಾನ್ ಪ್ರೀ ರೇಸ್ ವೀಕ್ಷಿಸಲು ತೆರಳಲಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.