ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬಾಂಗ್ಲಾಗೆ ವಿಂಡೀಸ್ ಸವಾಲು

Mainashree
Updated On : 24 Mar 2014, 10:04 am

ಢಾಕಾ: ಸೂಪರ್ 10ರ ಹಂತದ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಹೀನಾಯ ಸೋಲನುಭವಿಸಿರುವ ವೆಸ್ಟ್ ಇಂಡೀಸ್ ತಂಡ, ತಮ್ಮ ಎರಡನೇ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಬಾಗ್ಲಾದೇಶ ವಿರುದ್ಧ ಗೆಲವು ದಾಖಲಿಸಿ ಪಂದ್ಯಾವಳಿಯಲ್ಲಿ ಗೆಲವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ. ಇನ್ನು ಬಾಂಗ್ಲಾದೇಶ ತಂಡ ಅರ್ಹತಾ ಸುತ್ತಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಸೂಪರ್ 10 ಹಂತಕ್ಕೆ ಪ್ರವೇಶಿಸಿದ್ದು, ಈ ಹಂತದಲ್ಲೂ ಗೆಲವಿನ ಹಾದಿಯಲ್ಲಿ ಸಾಗಲು ಸಿದ್ಧತೆ ನಡೆಸಿದೆ.
ವೆಸ್ಟ್ ಇಂಡೀಸ್ ತಂಡ ಡ್ವೈನ್ ಸ್ಮಿತ್, ಕ್ರಿಸ್ ಗೇಯ್ಲ್, ಮರ್ಲಾನ್ ಸ್ಯಮ್ಯುಯೆಲ್ಸ್, ಡಾರೆನ್ ಸಾಮಿ, ಡ್ವೈನ್ ಬ್ರಾವೊರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರು ತಂಡದಲ್ಲಿದ್ದರೂ, ತಂಡ ಸಂಘಟಿತ ಪ್ರದರ್ಶನದ ಕೊರತೆಯಿಂದ ಸೋಲನುಭವಿಸುತ್ತಿದೆ.
ಇನ್ನು ಬಾಂಗ್ಲಾದೇಶದ ಪರ ತಮೀಮ್ ಇಕ್ಬಾಲ್ ಹಾಗೂ ಅನಾಮುಲ್ ಹಕ್ ಉತ್ತಮ ಆರಂಭ ನೀಡಿದರೆ ತಂಡ ಬೃಹತ್ ಮೊತ್ತವನ್ನು ಸುಲಭವಾಗಿ ಪೇರಿಸಲಿದೆ. ಅಲ್ಲದೆ ಮುಶ್ಫಿಕರ್ ರಹೀಮ್ ಜತೆಗೆ ಆಲ್ರೌಂಡರ್ ಶಕಿಬ್ ಅಲ್ ಹಸನ್ ಅತ್ಯುತ್ತಮ ಆಟಗಾರರಾಗಿದ್ದಾರೆ.
ಒಟ್ಟಿನಲ್ಲಿ ಉಭಯ ತಂಡಗಳು ಗೆಲವಿಗಾಗಿ ಕಾದಾಟ ನಡೆಸುತ್ತಿದ್ದು, ಜಯದ ಹಾರ ಯಾರ ಕೊರಳಿಗೆ ಎಂಬುದನ್ನು ಕಾದು ನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement