ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರು. 5 ಲಕ್ಷ ಪರಿಹಾರ ಪಡೆದ ದೀಪಿಕಾ

Mainashree
Updated On : 24 Mar 2014, 11:52 am

ಚೆನ್ನೈ: ಇಲ್ಲಿನ ಆ್ಯಕ್ಸಿಸ್ ಬ್ಯಾಂಕ್ ತನ್ನ ಸೇವೆಯಲ್ಲಿ ಲೋಪ ಎಸಗಿದ ಹಿನ್ನಲೆಯಲ್ಲಿ ಖ್ಯಾತ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಾಲ್ ಅವರಿಗೆ ರು. 5ಲಕ್ಷ ಪರಿಹಾರ ನೀಡಬೇಕು ಎಂದು ಗ್ರಾಹಕ ನ್ಯಾಯಾಲಯ ಆದೇಶ ಹೊರಡಿಸಿದೆ.
ನೆದರ್ಲೆಂಡ್ ನರೊಟೆರ್ಡ್‌ಹ್ಯಾಮ್‌ನ  ಹೋಟೆಲ್‌ಒಂದರಲ್ಲಿ ತಮ್ಮ ಡೆಬಿಟ್ ಕಾಡನ್ನು ಬಳಸುವಾಗ ಸಮಸ್ಯೆ ಎದುರಾದ ಹಿನ್ನಲೆಯಲ್ಲಿ, ದೀಪಿಕಾ ಪಳ್ಳಿಕಾಲ್ ಬ್ಯಾಂಕ್ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದರು. ದೀಪಿಕಾ ಅವರು ಹಣ ಪಡೆಯಲು ಪ್ರಯತ್ನಿಸಿದ ಮೊತ್ತಕ್ಕಿಂತ 10 ಪಟ್ಟು ತಮ್ಮ ಖಾತೆಯಲ್ಲಿ ಹಣವಿದ್ದರೂ ತಮ್ಮ ಡೆಬಿಟ್ ಕಾರ್ಡ್‌ನಿಂದ ಆ ಮೊತ್ತವನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ದೀಪಿಕಾ ದೂರಿನಲ್ಲಿ ವಿವರಿಸಿದ್ದಾರೆ.       ಮಾನಸಿಕ ಹಿಂಸೆ ಹಾಗೂ ಇತರೆ ಕಾರಣಗಳ ಹಿನ್ನಲೆಯಲ್ಲಿ ದೀಪಿಕಾ 10ಲಕ್ಷ ಪರಿಹಾರ ಕೋರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement