ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕಲಿತ ವಿವಿಯಿಂದಲೇ 'ಗೌಡಾ' ಸೌಭಾಗ್ಯ: ಕಂಬಾರ

Mainashree
Updated On : 25 Mar 2014, 9:48 am

ಧಾರವಾಡ: 'ನಾನು ಕಲಿತ ವಿಶ್ವವಿದ್ಯಾಲಯದಿಂದಲೇ ಗೌರವ ಡಾಕ್ಟರೇಟ್ ಪಡೆಯುತ್ತಿರುವುದು ನನ್ನ ಸೌಭಾಗ್ಯ' ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ೤ ಚಂದ್ರಶೇಖರ ಕಂಬಾರ ಹೇಳಿದರು.
ಗಾಂಧಿಭವನದಲ್ಲಿ ಮಂಗಳವಾರ ನಡೆದ ಕರ್ನಾಟಕ ವಿಶ್ವವಿದ್ಯಾಲಯದ 64ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಅವರು,  'ನನ್ನ ವ್ಯಾಸಂಗದ ದಿನಗಳಲ್ಲಿ  ಡಾ೤ ಡಿ.ಸಿ. ಪಾವಟೆ ಕುಲಪತಿಗಳಾಗಿದ್ದರು. ವಿಶ್ವವಿದ್ಯಾಲಯ ಇಡೀ ಪ್ರಪಂಚದಲ್ಲಿಯೇ ಹೆಸರು ಗಳಿಸಲು ಅವರು ಕಾರಣರಾಗಿ, ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ಮಾಡಿದರು. ರಾಜ್ಯದ ಯಾವ ವಿವಿಯೂ ಇಷ್ಟು ಸುಂದವಾಗಿಲ್ಲ. ಇಲ್ಲಿ ವ್ಯಾಸಂಗ ಮಾಡಿದ ನಾವೇ ಧನ್ಯರು'  ಎಂದು ಭಾವುಕರಾಗಿ ನುಡಿದರು.
ಡಾ೤ ಚಂದ್ರಶೇಖರ ಕಂಬಾರ (ಸಾಹಿತ್ಯ), ವಿಜಯ ಸಂಕೇಶ್ವರ (ಉದ್ಯಮ), ಗೋವಾ ಮಾಜಿ ಮುಖ್ಯಮಂತ್ರಿ ಶಶಿಕಲಾ ಕಾಕೋಡ್ಕರ್, ಬೆಂಗಳೂರಿನ ಡಾ. ಮರಿಗೌಡ ನಾಗರಾಜು, ಬೆಂಗಳೂರಿನ ಎಂ. ಶ್ರೀನಿವಾಸನ್ (ಸಮಾಜ ಸೇವೆ), ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಶರತ್ ಜವಳಿ (ನ್ಯಾಯಾಂಗ), ಪದ್ಮರಾಜ ದಂಡಾವತಿ (ಪತ್ರಿಕೋದ್ಯಮ), ಶಿರಸಿಯ ಡಾ೤ ವಿ.ಎಸ್. ಸೋಂದೆ (ಶಿಕ್ಷಣ) ಹಾಗೂ ಪಂ. ವೆಂಕಟೇಶ ಕುಮಾರ್ (ಸಂಗೀತ) ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಪದವಿ ಪ್ರದಾನ: ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಪದ್ಮಭೂಷಣ ಪ್ರೊ೤ ಪಿ. ಬಲರಾಮ ಘಟಿಕೋತ್ಸವ ಭಾಷಣ ಮಾಡಿದರು. 168 ಪಿಎಚ್‌ಡಿ, 11 ಎಂಫಿಲ್, 3886 ಸ್ನಾತಕೋತ್ತರ, 15,790 ಪದವಿ, 102 ಕಾನೂನು, 281 ಡಿಪ್ಲೊಮಾ, 120 ಸರ್ಟಿಫಿಕೇಟ್ ಕೋರ್ಸ್ ಸೇರಿ 530 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement