ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಚಾಂಪಿಯನ್ಸ್ ಲೀಗ್ ಫಿಕ್ಸಿಂಗ್ ಬಗ್ಗೆ ಐಸಿಸಿ ದಾಖಲೆ ಹೊಂದಿದೆ: ಮೋದಿ

Mainashree
Updated On : 25 Mar 2014, 9:45 am

ನವದೆಹಲಿ: ಕಳೆದ ಸಾಲಿನ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಾವಳಿಯಲ್ಲಿ ಹಲವಾರು ಆಟಗಾರರು ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರ ಬಗ್ಗೆ ಐಸಿಸಿಯ ಬಳಿ ಸಾಕಷ್ಟು ದಾಖಲೆಗಳಿವೆ. ಅಲ್ಲದೆ ವಿಶ್ವದ ಇತರೆ ಕ್ರಿಕೆಟ್‌ಗಳಲ್ಲೂ ಫಿಕ್ಸಿಂಗ್ ನಡೆದಿರುವ ಬಗ್ಗೆ ಐಸಿಸಿ ದಾಖಲೆ ಹೊಂದಿದೆ ಎಂದು ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ತಮ್ಮ ಹಲವಾರು ಟ್ವೀಟ್‌ಗಳ ಮೂಲಕ ಲಲಿತ್ ಮೋದಿ, ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಅಲ್ಲದೆ ಐಪಿಎಲ್ ಸಿಇಒ ಸುಂದರ್ ರಾಮನ್ ಹಾಗೂ ವಿಂದೂ ದಾರಾ ಸಿಂಗ್ ನಡುವಣ ಮಾತುಕತೆಯ ಟ್ರಾನ್‌ಸ್ಕ್ರಿಪ್ಟ್ಸ್‌ನಲ್ಲಿ ಸುಂದರ್ ಐಪಿಎಲ್ ಆಟಗಾರರನ್ನು ವಿಂದೂವಿಗೆ ಪರಿಚಯಿಸಿರುವುದು ತಿಳಿದುಬರಲಿದೆ ಎಂದು ಆರೋಪಿಸಿದ್ದಾರೆ.
ವಿಂದೂ ದಾರಾಸಿಂಗ್ ಹಾಗೂ ಐಪಿಎಲ್ ಸಿಇಒ ನಡುವಣ ಸಂಪರ್ಕದ ಬಗ್ಗೆ ತನಿಖೆಯಾಗಬೇಕು ಎಂದು ಮೋದಿ ತಿಳಿಸಿದ್ದಾರೆ.
ಐಸಿಸಿ ಬಳಿ ಫಿಕ್ಸಿಂಗ್ ನಡೆದಿರುವ ಬಗ್ಗೆ ಸಾಕಷ್ಟು ದಾಖಲಿಗಳಿವೆ. ಬಿಸಿಸಿಐ ಹಾಗೂ ಐಸಿಸಿ ಕ್ರೀಡೆಯಲ್ಲಿ ಫಿಕ್ಸಿಂಗ್ ಸಮಸ್ಯೆಯನ್ನು ಬಗೆಹರಿಸಲು ಆಸಕ್ತಿ ಹೊಂದಿಲ್ಲ. ಮುಂದಿನ ವಾರದ ಒಳಗೆ ಐಸಿಸಿ ತಮ್ಮಲ್ಲಿರುವ ದಾಖಲೆಯಗಳನ್ನು ಹೊರಗೆ ತರದಿದ್ದರೆ, ನನ್ನ ಬಳಿ ಇರುವ ದಾಖಲೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುವುದು ಎಂದು ಮೋದಿ ತಿಳಿಸಿದ್ದಾರೆ.
ಈ ದಾಖಲೆಗಳಲ್ಲಿ ಆಟಗಾರರ ಹೇಳಿಕೆಗಳಿವೆ. ಹಾಗಾಗಿ ಐಸಿಸಿ ಯಾಕೆ ಇನ್ನು ಈ ಅಂಶವನ್ನು ಹೊರಗೆ ತಂದಿಲ್ಲ? ಯಾವುದಕ್ಕಾಗಿ ಅವರು ಕಾಯುತ್ತಿದ್ದಾರೆ? ಎಂದು ಮೋದಿಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement