ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಚೆಸ್: ಅಗ್ರಸ್ಥಾನದಲ್ಲಿ ಆನಂದ್ ಮುನ್ನಡೆ

Mainashree
Updated On : 25 Mar 2014, 9:44 am

ಖಾಂಟಿ ಮ್ಯಾನ್ಸಿಯಸ್ಕ್ (ರಷ್ಯಾ): ವಿಶ್ವದ ಮಾಜಿ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ 10ನೇ ಸುತ್ತಿನ ಬಳಿಕವೂ ಅಗ್ರಸ್ಥಾನದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಚೆನ್ನೈ ಮೂಲದ ಆನಂದ್, ಮಂಗಳವಾರ ನಡೆದ ಹತ್ತನೇ ಸುತ್ತಿನ ಪಂದ್ಯದಲ್ಲಿ ಅಜರ್‌ಬೈಜಾನ್‌ನ ಶಖರಿಯಾರ್ ಮಾಮೆಡೈರೊವಾ ವಿರುದ್ಧ 30ನೇ ನಡೆಯಲ್ಲಿ ಡ್ರಾ ಫಲಿತಾಂಶಕ್ಕೆ ತೃಪ್ತಿ ಹೊಂದಿದರು.
ಇದರೊಂದಿಗೆ ಆನಂದ್, ಅಂಕ ಸಂಪಾದನೆಯನ್ನು 6.5ಕ್ಕೆ ಹೆಚ್ಚಿಸಿಕೊಂಡು ಅಗ್ರಸ್ಥಾನದ ಗೌರವ ಉಳಿಸಿಕೊಂಡಿದ್ದಾರೆ.
ಆನಂದ್‌ಗೆ ಸಮೀಪದ ಸ್ಪರ್ಧಿಯಾಗಿರುವ ಆರ್ಮೆನಿಯಾದ ಲೆವೊನ್ ಅರೊನಿಯನ್ 5.5 ಅಂಕಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ದಿನದ ಮತ್ತೊಂದು ಪಂದ್ಯದಲ್ಲಿ ಅರೊನಿಯನ್ ಕೂಡ ಬಲ್ಗೇರಿಯಾದ ವೆಸೆಲಿನ್ ಟೊಪೊಲೊವ್ ವಿರುದ್ಧ ಡ್ರಾ ಫಲಿತಾಂಶಕ್ಕೆ ಸಮಾಧಾನಗೊಳ್ಳಬೇಕಾಯಿತು.
ಉಳಿದಂತೆ, ಶಖರಿಯಾರ್, ರಷ್ಯಾದ ಸೆರ್ಗಿ ಕರ್ಜಾಕಿನ್ ಮತ್ತು ಪೀಟರ್ ಸ್ವಿಡ್ಲರ್ ತಲಾ 5 ಅಂಕಗಳಿಸಿ ನಂತರದ ಸ್ಥಾನದಲ್ಲಿದ್ದಾರೆ. ರಷ್ಯಾದ ಡಿಮಿಟ್ರಿ ಆ್ಯಂಡ್ರೆಕಿನ್ ಮತ್ತು ವ್ಲಾಡಿಮಿರ್ ಕ್ರಾಮ್ನಿಕ್ ತಲಾ 4.5 ಅಂಕ ಹಾಗೂ ಟೊಪೊಲೊವ್ 4 ಅಂಕಗಳ ಗಳಿಕೆಯಲ್ಲಿದ್ದಾರೆ. ಇನ್ನು ನಾಲ್ಕು ಸುತ್ತುಗಳ ಆಟ ಬಾಕಿ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement