ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಜರ್ಮನಿಗೆ ಟಿಟಿ ತಂಡದ ಪಯಣ

Mainashree
Updated On : 25 Mar 2014, 9:47 am

ನವದೆಹಲಿ: ಅನುಭವಿ ಆಟಗಾರ ಶರತ್ ಕಮಲ್ ನಾಯಕತ್ವದ 10 ಸದಸ್ಯರ ಭಾರತ ಟೇಬಲ್ ಟೆನಿಸ್ ತಂಡ ಜರ್ಮನಿ ಮತ್ತು ಸ್ಪೇನ್‌ಗಳಲ್ಲಿ ನಡೆಯಲಿರುವ ವಿಶ್ವ ಪ್ರೊ ಟೂರ್‌ನಲ್ಲಿ ಪಾಲ್ಗೊಳ್ಳಲು ಆ ದೇಶಗಳಿಗೆ ಪ್ರಯಾಣ ಬೆಳೆಸಿದೆ.   ಈ ತಂಡದಲ್ಲಿ ಶರತ್ ಕಮಲ್ ಅಲ್ಲದೇ, ಸೌಮ್ಯಜೀತ್ ಘೋಷ್, ಹರ್ಮೀತ್ ದೇಸಾಯಿ, ಆಂಥೋನಿ ಅಮಲ್‌ರಾಜ್ ಮತ್ತು ರಾಷ್ಟ್ರೀಯ ಚಾಂಪಿಯನ್ ಸಾನಿಲ್ ಶೆಟ್ಟಿ ಪುರುಷರ ವಿಭಾಗದಲ್ಲಿದ್ದಾರೆ.
  ಇನ್ನು ಮಹಿಳೆಯರ ವಿಭಾಗದಲ್ಲಿ ಕೆ. ಶಾಮಿನಿ ನೇತೃತ್ವ ವಹಿಸಿದ್ದು, ಮಾಧುರಿ ಪಾಟ್ಕರ್, ರಾಷ್ಟ್ರೀಯ ಚಾಂಪಿಯನ್ ಅಂಕಿತಾ ದಾಸ್, ಪೂಜಾ ಸಹಸ್ರಾಬುದ್ಧಿ ಮತ್ತು ಮಾಣಿಕಾ ಬಾತ್ರಾ ಇದ್ದಾರೆ. ಈ ಎರಡೂ ದೇಶಗಳ ಪ್ರವಾಸದಲ್ಲಿ ವಿದೇಶಿ ಕೋಚ್ ಪೀಟರ್ ಎಂಗೆಲ್ ಮತ್ತು ರಾಷ್ಟ್ರೀಯ ಕೋಚ್ ಭವಾನಿ ಮುಖರ್ಜಿ ಆಟಗಾರರಿಗೆ ನೆರವಾಗಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement