ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಟಿ20ಯಲ್ಲಿ ರೈನಾ ಸಾಮರ್ಥ್ಯ ಉತ್ತಮ

Mainashree
Updated On : 25 Mar 2014, 10:12 am

ಮೀರ್‌ಪುರ: ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸುರೇಶ್ ರೈನಾ ಟಿ-20 ಮಾದರಿಯಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂಬುದರಲ್ಲಿ ಅನುಮಾನವಿಲ್ಲ. ಆತ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿನ ಪ್ರದರ್ಶನ ಮುಂದಿನ ದಿನಗಳಲ್ಲಿ ಎದುರಾಗುಲಿರುವ ದೊಡ್ಡ ಸವಾಲುಗಳನ್ನು ಎದುರಿಸಲು ಆತ್ಮವಿಶ್ವಾಸ ಹೆಚ್ಚಿಸಲಿದೆ.
ಪ್ರಸಕ್ತ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅಭ್ಯಾಸ ಪಂದ್ಯವೂ ಸೇರಿದಂತೆ ರೈನಾ, 41, 54, ಅಜೇಯ 31 ಹಾಗೂ ಅಜೇಯ 1 ರನ್ ದಾಖಲಿಸಿದ್ದು, ಮತ್ತೆ ಫಾರ್ಮ್ ಕಂಡುಕೊಂಡಿರುವುದಕ್ಕೆ ರೈನಾ, ತಮಗೆ ಸಲಹೆ ನೀಡಿದ ಗಂಗೂಲಿ ಅವರಿಗೆ ಶ್ರೇಯ ಸಲ್ಲಿಸಿದ್ದರು.
ಸುರೇಶ್ ರೈನಾ ಅವರ ಪ್ರತಿಭೆ ಹಾಗೂ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನವಿಲ್ಲ. ಆತ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಮನಮೋಹಕ ಆಟ ಪ್ರದರ್ಶಿಸಿದ್ದಾರೆ. ಆತ ಟಿ-20 ಮಾದರಿಯಲ್ಲಿ ಅಪಾಯಕಾರಿ ಬ್ಯಾಟ್ಸ್‌ಮನ್ ಆಗಿದ್ದು, ಯಾವುದೇ ಎದುರಾಳಿ ತಂಡಕ್ಕೂ ದುಸ್ವಪ್ನವಾಗಿ ಕಾಡಬಲ್ಲ ಆಟಗಾರ. ಈ ವಿಶ್ವಕಪ್‌ನಲ್ಲಿನ ಪ್ರದರ್ಶನವನ್ನು ರೈನಾ ಮುಂದಿನ ದಿನಗಳಲ್ಲೂ ಮುಂದುವರಿಸುವ ವಿಶ್ವಾಸವಿದೆ ಎಂದು ಗಂಗೂಲಿ ತಿಳಿಸಿದ್ದಾರೆ.
ಭಾರತ ತಂಡ ಜುಲೈನಿಂದ ಇಂಗ್ಲೆಂಡ್ ಪ್ರವಾಸ, ನಂತರ ಆಸ್ಟ್ರೇಲಿಯಾ ಪ್ರವಾಸ ಹಾಗೂ ಏಕದಿನ ವಿಶ್ವಕಪ್ ಈಗೆ ಹಲವಾರು ಬೃಹತ್ ಸವಾಲುಗಳನ್ನು ಎದುರಿಸಲು ಸಜ್ಜಾಗಿದೆ. ಹಾಗಾಗಿ ಸುರೇಶ್ ರೈನಾ ಈ ಮಹತ್ವದ ಸರಣಿಗಳಲ್ಲಿ ಯಶಸ್ಸು ಸಾಧಿಸಬೇಕಾಗಿರುವುದು ಅಗತ್ಯ ಎಂದು ಗಂಗೂಲಿ ಅಭಿಪ್ರಾಯಪಟ್ಟರು.
ಇನ್ನು ರೈನಾಗೆ ಸಲಹೆ ನೀಡಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, ಹೌದು ನಾನು ಸುರೇಶ್ ಜತೆಗೆ ಮಾತುಕತೆ ನಡೆಸಿದ್ದೆ. ನಾನು ಆತನೊಂದಿಗೆ ಮಾತನಾಡಿದ್ದು, ಇಬ್ಬರು ವ್ಯಕ್ತಿಗಳ ನಡುವೆ ಇರಬೇಕಾದ ವಿಚಾರವಾಗಿದ್ದು, ಅದನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement