ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಿರಾಟ್ ಹೆಚ್ಚು ದಾಖಲೆ ಮುರಿಯಬಲ್ಲ: ಕಪಿಲ್

Mainashree
Updated On : 25 Mar 2014, 10:13 am

ಕೌಲಾಲಂಪುರ: ಭಾರತ ತಂಡದ ಬ್ಯಾಟಿಂಗ್‌ನ ಆಧಾರ ಸ್ತಂಭವಾಗಿರುವ ವಿರಾಟ್ ಕೊಹ್ಲಿ ಎಲ್ಲರಿಗಿಂತ ಹೆಚ್ಚಿನ ದಾಖಲೆ ಮುರಿಯಲಿದ್ದಾರೆ ಎಂದು ಭಾರತದ ಮಾಜಿ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿಯ ಪ್ರದರ್ಶನವನ್ನು ಮುಕ್ತವಾಗಿ ಕೊಂಡಾಡಿರುವ ಕಪಿಲ್ ದೇವ್, ಆತ ಗಾಯದ ಸಮಸ್ಯೆಯಿಂದ ದೂರ ಉಳಿದಿದ್ದೇ ಆದಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಬಹುದು ಎಂದು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಇತರರಿಗಿಂತ ಹೆಚ್ಚಿನ ದಾಖಲೆಯನ್ನು ಮುರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿಶ್ವ ಕ್ರಿಕೆಟ್‌ನಲ್ಲಿ ಎರಡನೇ ಡಾನ್ ಬ್ರಾಡ್ಮನ್ ಇರುವುದಿಲ್ಲ. ಹಾಗೆಯೇ ಎರಡನೇ ಸಚಿನ್ ತೆಂಡೂಲ್ಕರ್ ಸಹ ಸಿಗುವುದಿಲ್ಲ. ಹಾಗಾಗಿ ನಾನು ಕೊಹ್ಲಿಯನ್ನು ಇತರರೊಂದಿಗೆ ಹೋಲಿಸುವುದಿಲ್ಲ. ಆದರೆ ಕೊಹ್ಲಿ ಅತ್ಯದ್ಭುತ ಸಾಮರ್ಥ್ಯ ಹೊಂದಿದ್ದು, ಆತನಲ್ಲಿ ಸಚಿನ್ ದಾಖಲೆ ಹಿಂದಿಕ್ಕುವ ಸಾಮರ್ಥ್ಯ ಇದೆ ಎಂದು ಕಪಿಲ್ ದೇವ್ ತಿಳಿಸಿದ್ದಾರೆ.
ಕೊಹ್ಲಿ ಇತರರಿಗಿಂತ ಪರಿಣಾಮಕಾರಿ ಪ್ರತಿಭೆ ಇರುವುದನ್ನು ಸಾಬೀತು ಪಡಿಸಿದ್ದಾರೆ. ಒಂದುವೇಳೆ ಕೊಹ್ಲಿ 32ರಿಂದ 34ರ ವಯಸ್ಸಿನವರೆಗೂ ಯಾವುದೇ ಗಾಯದ ಸಮಸ್ಯೆಗೆ ಸಿಲುಕದೇ ಇದೇ ಪ್ರದರ್ಶನ ಮುಂದುವರಿಸಿದರೆ, ಆತ ಖಂಡಿತವಾಗಿಯೂ ವಿವಿಎನ್ ರಿಚರ್ಡ್ ಹಾಗೂ ಸಚಿನ್ ದಾಖಲೆಗಿಂತ ಹೆಚ್ಚಿನ ಸಾಧನೆ ಮಾಡಲಿದ್ದಾನೆ.
ಇದೇ ವೇಳೆ ಕಪಿಲ್ ದೇವ್, ಭಾರತ ತಂಡದ ನಾಯಕತ್ವದಿಂದ ಧೋನಿಯವರನ್ನು ತೆಗೆಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement