ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೈನಾ, ಸಿಂಧು ಸೆಣಸು ಸಾಧ್ಯತೆ

Mainashree
Updated On : 25 Mar 2014, 9:48 am

ನವದೆಹಲಿ: ಭಾರತದ ಪ್ರಮುಖ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ ಸಿಂಧು ಅವರು ಇಂಡಿಯನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಗಳಿವೆ.
ಏ.1ರಿಂದ6ರವರೆಗೆ ಇಲ್ಲಿನ ಸಿರಿ ಫೋರ್ಟ್ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಸೈನಾ ಹಾಗೂ ಸಿಂಧು ಪ್ರಮುಖ ಆಕರ್ಷಣೆಯಾಗಿದ್ದಾರೆ.
ಈ ಇಬ್ಬರು ಆಟಗಾರ್ತಿಯರು ಎಂಟರ ಘಟ್ಟದಲ್ಲಿ ಚೀನಾ ಆಟಗಾರರ ಸವಾಲು ಎದುರಿಸಲಿದ್ದು, ಒಂದುವೇಳೆ ಇಬ್ಬರೂ ಆಟಗಾರ್ತಿಯರು ಉಪಾಂತ್ಯದ ಹಂತಕ್ಕೆ ತಲುಪಿದ್ದೇ ಆದಲ್ಲಿ ಅಭಿಮಾನಿಗಳು ಉಭಯ ತಾರೆಗಳ ಪರಸ್ಪರ ಕಾದಾಟ ವೀಕ್ಷಿಸಬಹುದು.
ವಿಶ್ವದ 9ನೇ ರ್ಯಾಂಕಿಂಗ್‌ನ ಸಿಂಧು ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಪ್ರಬಲ ಎದುರಾಳಿ ಚೀನಾದ ಶಿಕ್ಸಿಯಾನ್ ವಾಂಗ್ ಅವರನ್ನು ಎದುರಿಸಲಿದ್ದಾರೆ. ಆದರೆ ಸಿಂಧು ಈ ಹಿಂದೆ ವಾಂಗ್ ವಿರುದ್ಧದ ಎರಡೂ ಪಂದ್ಯದಲ್ಲಿ ಗೆಲವು ದಾಖಲಿಸಿರುವುದು, ಆತ್ಮ ವಿಶ್ವಾಸ ಹೆಚ್ಚಿಸಿದೆ.
ಇನ್ನು ಸೈನಾ ತಮ್ಮ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸಿಮೊನ್ ಪ್ರಸ್ಕ್ ವಿರುದ್ಧ ಕಾದಾಟ ನಡೆಸಲಿದ್ದು, ಸೈನಾ ಎಂಟರ ಘಟ್ಟದಲ್ಲಿ ಚೀನಾದ ಯಿಹಾನ್ ವಾಂಗ್ ಅವರನ್ನು ಎದುರಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement