ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಹಳದಿ ಗಂಟಲಿನ ಗುಬ್ಬಚ್ಚಿ ಪತ್ತೆ

Mainashree
Updated On : 25 Mar 2014, 9:48 am

ತುಮಕೂರು: ದೇವರಾಯನದುರ್ಗ ಅರಣ್ಯ ಪ್ರದೇಶದ ನಾಮದಚಿಲುಮೆ ಸಮೀಪ ಹಳದಿ ಗಂಟಲಿನ ಗುಬ್ಬಚ್ಚಿ ಪತ್ತೆಯಾಗಿದೆ. ಬೂದು ಮಿಶ್ರಿತ ಕಂದು ಬಣ್ಣದ ದೇಹ, ಪುಟಾಣಿ ರೆಕ್ಕೆಯ ಮೇಲೆ ಎರಡು ಸಾಲಿನ ಬಿಳಿಮಚ್ಚೆಗಳು, ಚಿಕ್ಕದಾದ ಬಾಲ, ಹಣ್ಣು ಬೀಜಗಳನ್ನು ತಿನ್ನಲು ಮೊಂಡು ಕೊಕ್ಕು ಹೊಂದಿದ ಸುಮಾರು 14 ಸೆಂ.ಮೀ ಉದ್ದದ ಈ ಪಕ್ಷಿಗೆ ಗಂಟಿಲಿನ ಭಾಗದಲ್ಲಿ ಲಿಂಬೆ ಮಿಶ್ರಿತ ಹಳದಿ ಬಣ್ಣದ ಮಚ್ಚೆ ಕಂಡು ಬರುತ್ತದೆ ಎಂದು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಬಿ.ವಿ. ಗುಂಡಪ್ಪ ತಿಳಿಸಿದ್ದಾರೆ. ಗಂಡುಗಳಿಗೆ ಮಾತ್ರ ಹಳದಿ ಮಚ್ಚೆ ಇದ್ದು, ಹೆಣ್ಣುಗಳಿಗೆ ಇರುವುದಿಲ್ಲ. ಆದ್ದರಿಂದ ಇದನ್ನು ಹಳದಿ ಗಂಟಲಿನ ಗುಬ್ಬಚ್ಚಿ ಎಂದು ಕರೆಯುತ್ತಾರೆ. ವಿಶ್ವವಿಖ್ಯಾತ ಪಕ್ಷಿ ತಜ್ಞ ದಿವಂಗತ ಡಾ. ಸಲೀಮ್ ಆಲಿಯವರು 1939 ರ ಡಿಸೆಂಬರ್ ತಿಂಗಳಲ್ಲಿ ದೇವರಾಯನದುರ್ಗ ಅರಣ್ಯಕ್ಕೆ ಭೇಟಿ ನೀಡಿದಾಗ ಈ ಪಕ್ಷಿಯನ್ನು ದಾಖಲು ಮಾಡಿದ್ದಾರೆ. ಈ ಪಕ್ಷಿಗಳು ದೇವರಾಯನದುರ್ಗ ಅರಣ್ಯದಂತಹ ಒಣ ಎಲೆ ಉದುರುವ ಕಾಡುಗಳಲ್ಲಿ ಮಾತ್ರ ಕಂಡು ಬರುವ ಅಪರೂಪದ ಪಕ್ಷಿಗಳಾಗಿವೆ. ಆಹಾರದ ಅಭಾವ, ಆವಾಸದ ನಾಶದಿಂದ ವಿನಾಶದ ಅಂಚಿನಲ್ಲಿವೆ ಎಂದು ಬಿ.ವಿ. ಗುಂಡಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement