ಆನ್ಲೈನ್ ಸಮೀಕ್ಷೆ: ಶ್ರೀನಿ ರಾಜಿನಾಮೆ ನೀಡಲಿ
ಕ್ರಿಕ್ಇನ್ಫೋ ವೆಬ್ಸೈಟ್ ನಡೆಸಿದ ಆನ್ಲೈನ್ ಸಮೀಕ್ಷೆಯಲ್ಲಿ ಪ್ರತಿಕ್ರಿಯೆ ನೀಡಿರುವ ಶೇ.90 ರಷ್ಟು ಮಂದಿ ಶ್ರೀನಿವಾಸನ್ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು ಎಂದು ತಿಳಿಸಿದ್ದಾರೆ.
ಮಂಗಳವಾರ ಸುಪ್ರೀಂ ಕೋರ್ಟ್ ಆದೇಶದ ನಂತರ ಕ್ರಿಕ್ಇನ್ಫೋ, ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಬುಧವಾರ ಮಧ್ಯಾಹ್ನದವರೆಗೂ ಸಮೀಕ್ಷೆ ನಡೆಸಿತು.
ಇದರಲ್ಲಿ ಭಾಗವಹಿಸಿದವರಲ್ಲಿ ಶೇ.90ರಷ್ಟು (14524) ಜನರು ಶ್ರೀನಿವಾಸನ್ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು ಎಂದಿದ್ದಾರೆ. ಆದರೆ ಕೇವಲ ಶೇ.7ರಷ್ಟು(1177) ಜನರು ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿ ಎಂದಿದ್ದಾರೆ. ಇನ್ನು ಉಳಿದ ಶೇ.3ರಷ್ಟು(531) ಜನರು ಗುರುವಾರ ನಡೆಯಲಿರುವ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆಯವರೆಗೆ ಕಾಯಬೇಕು ಎಂದಿದ್ದಾರೆ.