ಐಪಿಎಲ್ ರದ್ದುಗೊಳಿಸಿ: ಶಶಾಂಕ್
ದೇಶದ ಕ್ರಿಕೆಟ್ ಅಭಿಮಾನಿಗಳ ವಿಶ್ವಾಸ ಉಳಿಸಿಕೊಳ್ಳಲು ಹಾಗೂ ಕ್ರೀಡೆಯ ಗೌರವವನ್ನು ಉಳಿಸಿಕೊಳ್ಳುವ ಸಲುವಾಗಿ ಐಪಿಎಲ್ ಅನ್ನು ರದ್ದುಗೊಳಿಸಬೇಕು ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್ ತಿಳಿಸಿದ್ದಾರೆ. ಐಪಿಎಲ್ನ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣ ಬೆಳಕಿಗೆ ಬಂದಾಗಲೇ ನಾನು ಐಪಿಎಲ್ನ ಪ್ರತಿಯೊಂದು ಪಂದ್ಯವನ್ನು ತನಿಖೆ ನಡೆಸುವಂತೆ ತಿಳಿಸಿದ್ದೆ. ಈ ಪ್ರಕರಣ ವಿದೇಶಗಳಲ್ಲೂ ಹಬ್ಬಿರುವುದರಿಂದ ಇದರ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ತಿಳಿಸಿದ್ದಾರೆ. ಇದೇವೇಳೆ ಐಪಿಎಲ್ನ ಎಲ್ಲಾ ಪಂದ್ಯಗಳನ್ನು ತನಿಖೆ ಮಾಡಬೇಕು. ಐಪಿಎಲ್ನಲ್ಲಿ ಬೆಟ್ಟಿಂಗ್, ಫಿಕ್ಸಿಂಗ್ಗಳ ಆರೋಪದಿಂದ ಕ್ರಿಕೆಟ್ ಕ್ರೀಡೆ ಅಭಿಮಾನಿಗಳ ನಂಬಿಕೆ ಕಳೆದುಕೊಳ್ಳುತ್ತಿದೆ ಎಂದು ಮನೋಹರ್ ತಿಳಿಸಿದರು.