ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕರಾಳ ನೆನಪಿನ ನಡುವೆ ಮಲೇಷ್ಯನ್ ಗ್ರ್ಯಾನ್ ಪ್ರೀ

Mainashree
Updated On : 26 Mar 2014, 11:45 am

ಕೌಲಾಲಂಪುರ: 15 ವರ್ಷಗಳ ತಮ್ಮ ಫಾರ್ಮುಲಾ ಒನ್ ರೇಸ್ ಇತಿಹಾಸದಲ್ಲಿ ಮಲೇಷ್ಯಾ ಇದೇ ಮೊದಲ ಬಾರಿಗೆ ಕರಾಳ ನೆನಪಿನ ನಡುವೆ ಫಾರ್ಮುಲಾ ಒನ್ ರೇಸ್ ಆಯೋಜಿಸಲು ಸಜ್ಜಾಗಿದೆ.
ಕಳೆದವಾರ ಎಂಎಚ್370 ವಿಮಾನ ಹಿಂದೂ ಮಹಾಸಾಗರದಲ್ಲಿ ಪತನಗೊಂಡಿದ್ದು, 239 ಜನರು ಮೃತಪಟ್ಟಿದ್ದಾರೆ. ಈ ಕರಾಳ ಕಹಿ ನೆನಪಿನ ನಡುವೆಯೇ ಮಲೇಷ್ಯಾದಲ್ಲಿ ಇದೇ ವಾರಾಂತ್ಯದಲ್ಲಿ ಮಲೇಷ್ಯನ್ ಗ್ರ್ಯಾನ್ ಪ್ರೀ ರೇಸ್ ನಡೆಯಲಿದೆ.
ಈ ಗ್ರ್ಯಾನ್ ಪ್ರೀ ನಡೆಯಲಿರುವ ಸೆಪ್ಯಾಂಗ್ ರೇಸ್‌ಟ್ರ್ಯಾಕ್‌ನ ಸಮೀಪದಲ್ಲೇ ಕೌಲಾಲಂಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಎಂಎಚ್370 ವಿಮಾನ ಇಲ್ಲಿಂದಲೇ ಆಗಸಕ್ಕೆ ಹಾರಿತ್ತು.
ಇನ್ನು ವಿಮಾನದಲ್ಲಿ ನಾಪತ್ತೆಯಾದ ಸುಮಾರು 30 ವ್ಯಕ್ತಿಗಳ ಸಂಬಂಧಿಕರು ಕೌಲಾಂಲಂಪುರದ ಹೊಟೇಲ್‌ನಲ್ಲಿ ತಂಗಿದ್ದು, ಈಗ ಎಫ್1 ರೇಸ್‌ಗಾಗಿ ಕೊಠಡಿಗಳನ್ನು ಕಾಯ್ದಿರಿಸಿದ್ದ ಪರಿಣಾಮ ಅವರು ಕೊಠಡಿ ಖಾಲಿ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ.
ಈ ಕುರಿತು ಮಾತನಾಡಿರುವ ಸೆಪ್ಯಾಂಗ್ ರೇಸ್‌ಟ್ರ್ಯಾಕ್‌ನ ಸಿಇಒ ರಾಜ್ಲಾನ್ ರಾಜಾಲಿ, ಈ ಕರಾಳ ಘಟನೆಯ ಹೊರತಾಗಿಯೂ ರೇಸ್‌ಗೆ ಸಾಕಷ್ಟು ಜನರು ಆಗಮಿಸುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement