ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಟೀಂ ಇಂಡಿಯಾ ತಾಲೀಮು

Mainashree
Updated On : 26 Mar 2014, 10:28 am

ಮೀರ್‌ಪುರ: ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸತತ ಎರಡು ಗೆಲವು ದಾಖಲಿಸಿರುವ ಭಾರತ ತಂಡ, ತನ್ನ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದ್ದು, ಮುಂದಿನ ಪಂದ್ಯಕ್ಕೆ ತನ್ನ ಅಭ್ಯಾಸ ಆರಂಭಿಸಿದೆ. ಅಲ್ಲದೆ ಈ ವೇಳೆ ತಂಡದ ಆಟಗಾರರು ಹುಮ್ಮಸ್ಸಿನಿಂದ ಕಂಡು ಬಂದಿರುವುದು ತಂಡದ ಪಾಲಿಗೆ ನೆಮ್ಮದಿ ತಂದಿದೆ.
ಬುಧವಾರ ಶೇರ್ ಇ ಬಾಂಗ್ಲಾ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ ಟೀಂ ಇಂಡಿಯಾ ಆಟಗಾರರು, ಸುಮಾರು ಎರಡೂವರೆ ತಾಸುಗಳ ಕಾಲ ನೆಟ್ಸ್‌ನಲ್ಲಿ ಬೆವರು ಹರಿಸಿದರು.
ಈ ವೇಳೆ ಆಟಗಾರರು ಉತ್ತಮ ಉತ್ಸಾಹ ಹಾಗೂ ಚುರುಕಿನಿಂದ ಕೂಡಿದ್ದು ಕಂಡುಬಂದಿದೆ. ಸತತ ವೈಫಲ್ಯಗಳಂದ ಟೀಕೆಗಳಿಗೆ ಗುರಿಯಾಗಿ ಒತ್ತಡಕ್ಕೆ ಸಿಲುಕಿದ್ದ ಭಾರತ ತಂಡ ಈಗ ತಮ್ಮ ಲಯ ಕಂಡುಕೊಂಡಿರುವಂತೆ ಕಾಣುತ್ತಿದೆ.
ಎರಡನೇ ಪದ್ಯದ ನಂತರ ಭಾರತ ತಂಡಕ್ಕೆ ಹೆಚ್ಚಿನ ವಿರಾಮ ದೊರೆತಿರುವುದು ಆಟಗಾರರು ಮತ್ತೆ ತಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳಲು ನೆರವಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement