ಐಪಿಎಲ್ ಪ್ರಕರಣ ಸಾಗಿ ಬಂದ ಹಾದಿ
ಮೇ 16, 2013
ಪ್ರಕರಣದಲ್ಲಿ ಸಿಕ್ಕಿಬಿದ್ದ ರಾಜಸ್ಥಾನ ರಾಯಲ್ಸ್ ತಂಡದ ಮೂವರು ಆಟಗಾರರಾದ ಎಸ್. ಶ್ರೀಶಾಂತ್, ಅಂಕಿತ್ ಚೌಹಾಣ್ ಹಾಗೂ ಅಜಿತ್ ಚಾಂಡಿಲಾ ಬಂಧನ. ತಕ್ಷಣವೇ ಬಿಸಿಸಿಐನಿಂದ ಮೂವರ ಅಮಾನತು.
ಮೇ 21, 2013
ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿದ್ದ ಬಾಲಿವುಡ್ ನಟ ವಿಂದೂ ದಾರಾ ಸಿಂಗ್ ಬಂಧನ. ಮೇ 23, 2013 ವಿಂದೂ ನೆರವಿನೊಂದಿಗೆ ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿದ್ದ ಗುರುನಾಥ್ ಮೇಯಪ್ ಮುಂಬೈ ಪೋಲಿಸರಿಂದ ಬಂಧನ.
ಜೂನ್ 2, 2013 ಪ್ರಕರಣದ ಕುರಿತು ತನಿಖೆ ನಡೆಸಲು, ನಿವೃತ್ತ ನ್ಯಾಯಾಧೀಶರಾದ ಜಯರಾಮ್ ಚೌಟಾ ಮತ್ತು ಟಿ. ಬಾಲಸುಬ್ರಮಣ್ಯನ್ ಅವರನ್ನೊಳಗೊಂಡ ಇಬ್ಬರು ಸದಸ್ಯರ ಸಮಿತಿ ರಚಿಸಿದ ಬಿಸಿಸಿಐ. ತನಿಖೆ ಮುಕ್ತಾಯದವರೆಗೂ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಶ್ರೀನಿವಾಸನ್ ಕೆಳಗಿಳಿಯಲು ತೀರ್ಮಾನ.ಜೂನ್ 6, 2013
ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕ ರಾಜ್ ಕುಂದ್ರಾ ತಪ್ಪೊಪ್ಪಿಕೊಂಡ ಬಗ್ಗೆ ಪೊಲೀಸರಿಂದ ಬಹಿರಂಗ.ಜೂನ್ 28, 2013 ಬಿಸಿಸಿಐ ನೇಮಿಸಿದ ಸಮಿತಿಯಿಂದ ಕ್ಲೀನ್ ಚಿಟ್. ಶ್ರೀನಿವಾಸನ್ ಅಧ್ಯಕ್ಷ ಸ್ಥಾನಕ್ಕೆ ವಾಪಸ್.
ಆಗಸ್ಟ್ 30, 2013
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಿನ್ನೆಲೆಯಲ್ಲಿ ರಾಜಸ್ಥಾನ ರಾಯಲ್ಸ್, ಇಂಡಿಯಾ ಸಿಮೆಂಟ್ಸ್ ಮತ್ತು ಬಿಸಿಸಿಐಗೆ ಸುಪ್ರೀಂ ಕೋರ್ಟ್ನಿಂದ ನೋಟಿಸ್.ಸೆಪ್ಟೆಂಬರ್ 13, 2013
ಬಿಸಿಸಿಐನಿಂದ ಬಂಧಿತ ರಾಜಸ್ಥಾನ ರಾಯಲ್ಸ್ ಆಟಗಾರರ ಮೇಲೆ ನಿಷೇಧ.ಅಕ್ಟೋಬರ್ 7, 2014
ಐಪಿಎಲ್ ವಿವಾದದ ಕುರಿತು ಪರಿಶೀಲಿಸಲು ಸುಪ್ರೀಂ ಕೋರ್ಟ್ನಿಂದ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ನಾಯಕತ್ವದ ಸಮಿತಿ ರಚನೆ.ಫೆಬ್ರವರಿ 10, 2014
ಸುಪ್ರೀಂ ಕೋರ್ಟ್ಗೆ ಮುದ್ಗಲ್ ಸಮಿತಿಯಿಂದ ವರದಿ ಸಲ್ಲಿಕೆ.
ಮಾರ್ಚ್ 25, 2014
ಐಪಿಎಲ್ನಲ್ಲಿ ನ್ಯಾಯಸಮ್ಮತ ತನಿಖೆಗಾಗಿ ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯುವಂತೆ ಸುಪ್ರೀಂ ಕೋರ್ಟ್ ಸಲಹೆ.
ಮಾರ್ಚ್ 27, 2014
ಬಿಸಿಸಿಐ ಅಧ್ಯಕ್ಷರನ್ನಾಗಿ ಖ್ಯಾತ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ನೇಮಕ ಮಾಡಲು ಸುಪ್ರೀಂ ಸೂಚನೆ.
ಐಪಿಎಲ್ನ 7ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಡಲು ಅನುಮತಿ ನೀಡದಂತೆ ಸೂಚನೆ
ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡುವವರೆಗೂ ಕಾಯಬೇಕು. ಸುಪ್ರೀಂ ಯಾವುದೇ ರೀತಿಯ ತೀರ್ಪು ನೀಡಿದರೂ, ನಾವೆಲ್ಲ ಅದಕ್ಕೆ ಬದ್ಧರಾಗಿರಬೇಕಾದ ನಾಗರಿಕರಾಗಿದ್ದೇವೆ. ಸಮಾಜದಲ್ಲಿ ಏನು ನೋಡಿದ್ದೇವೆ ಅಂತಹ ಪ್ರಕರಣಗಳಲ್ಲಿ ಇದು ಒಂದಾಗಿದೆ. ಕ್ರಿಕೆಟ್ ಅದಕ್ಕೆ ಹೊರತಾಗಿಲ್ಲ' ಟಿ ಅನಿಲ್ ಕುಂಬ್ಳೆ
ಭಾರತ ತಂಡದ ಮಾಜಿ ನಾಯಕ 'ನಾನು ಸುಪ್ರೀಂ ಪ್ರಸ್ತಾಪವನ್ನು ಇನ್ನೂ ನೋಡಿಲ್ಲ. ಹೀಗಾಗಿ ಈ ಕುರಿತು ಯಾವುದೇ ರೀತಿಯ ಹೇಳಿಕೆ ನೀಡುವುದಿಲ್ಲ. ಆದರೆ, ನಾವು ಕೋರ್ಟ್ ತೀರ್ಪು ಬರುವರೆಗೂ ಕಾಯಬೇಕು. ಜೀವನದಲ್ಲಿ ಯಾವುದು ನಡೆಯಬಾರದು ಅದು ಕೆಲ ಬಾರಿ ನಡೆದುಬಿಡುತ್ತದೆ. ಆದರೆ, ಎಲ್ಲವೂ ತಪ್ಪಾಗಿರುವುದಿಲ್ಲ. ಇದಕ್ಕೂ ಮುನ್ನ ಅಂತಹ ಘಟನೆಗಳು ನಡೆದಿವೆ. ಆದರೆ, ಕ್ರಿಕೆಟ್ ಮಾತ್ರ ತನ್ನ ಹಾದಿಯಲ್ಲೇ ಸಾಗುತ್ತಿದೆ'
ಟಿ ರಾಹುಲ್ ದ್ರಾವಿಡ್
ಭಾರತ ತಂಡದ ಮಾಜಿ ನಾಯಕ
'ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಸಮಯದಲ್ಲಿ ಯಾವುದೇ ರೀತಿ ಹೇಳಿಕೆ ನೀಡಲಾಗುವುದಿಲ್ಲ. ಸುಪ್ರೀಂ ಕೋರ್ಟ್ ಎಲ್ಲರಿಗಿಂತ ದೊಡ್ಡದು. ಹೀಗಾಗಿ ಎಲ್ಲರೂ ಅದು ಹೇಳಿದಂತೆ ಅನುಸರಿಸಬೇಕು'ಟಿ ಕೃಷ್ಣಾಮಚಾರಿ ಶ್ರೀಕಾಂತ್ ಭಾರತ ತಂಡದ ಮಾಜಿ ನಾಯಕ