ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಯುವಿ ಫಾರ್ಮ್ಗೆ ಮರಳಲು ಒಂದು ಇನಿಂಗ್ಸ್ ಸಾಕು: ರೋಹಿತ್

Rashmi Kasaragodu
Updated On : 28 Mar 2014, 1:10 am

ಮೀರ್ಪುರ: ಫಾರ್ಮ್ ಸಮಸ್ಯೆಗೆ ಸಿಲುಕಿರುವ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಪರ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಿದ್ದು, ಯುವಿ ಫಾರ್ಮ್ಗೆ ಮರಳಲು ಕೇವಲ ಒಂದು ಇನಿಂಗ್ಸ್ ಸಾಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಯುವರಾಜ್ ಫಾರ್ಮ್ ಬಗ್ಗೆ ಹೇಳುವುದಾದರೆ, ಆತ ಫಾರ್ಮ್ಗೆ ಮರಳಲು ಕೇವಲ ಒಂದೇ ಒಂದು ಉತ್ತಮ ಇನಿಂಗ್ಸ್ ಸಾಕು. ಒಂದು ಇನಿಂಗ್ಸ್ನಲ್ಲಿ ಆತ ಉತ್ತಮವಾಗಿ ರನ್ ಗಳಿಸಿದರೆ, ಮತ್ತೆ ತನ್ನ ಆತ್ಮವಿಶ್ವಾಸವನ್ನು ಮರಳಿ ಪಡೆಯಲಿದ್ದಾರೆ. ಅವರು ಅತ್ಯುತ್ತಮ ಆಟಗಾರನಾಗಿದ್ದು, ಈ ಹಿಂದೆ ವಿಶ್ವಕಪ್ ಸೇರಿದಂತೆ ಸಾಕಷ್ಟು ಟಿ20 ಪಂದ್ಯಗಳಲ್ಲಿ ಗೆಲವು ತಂದುಕೊಟ್ಟಿದ್ದಾರೆ ಎಂದು ರೋಹಿತ್ ತಿಳಿಸಿದ್ದಾರೆ.
ನನ್ನ ಪ್ರಕಾರ ಮುಂದಿನ ಪಂದ್ಯದಲ್ಲಿ ಯುವರಾಜ್ ಸಿಂಗ್ ತಮ್ಮ ಇನಿಂಗ್ಸ್ ಆಡುವ ವಿಶ್ವಾಸವಿದೆ. ಅದು ತಂಡದ ಪಾಲಿಗೆ ಪ್ರಮುಖವಾಗಲಿದೆ. ಯುವಿ ಉತ್ತಮ ಫೀಲ್ಡರ್ ಸಹ ಹೌದು. ಆದರೆ ಕೆಲವೊಮ್ಮೆ ಉತ್ತಮ ಫೀಲ್ಡರ್ಗಳು ಕ್ಯಾಚ್ ಕೈಚೆಲ್ಲುತ್ತಾರೆ ಅದರಲ್ಲಿ ತಪ್ಪಿಲ್ಲ. ಆವರು ಮತ್ತೆ ತಮ್ಮ ಆತ್ಮವಿಶ್ವಾಸ ಪಡೆದರೆ, ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ ಎಂದು ಅಭಿಪ್ರಾಯಪಟ್ಟರು.
ಈಗಿರುವ ನಮ್ಮ ತಂಡ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಅರ್ಹತೆ ಹೊಂದಿದೆ.  2007ರಲ್ಲಿ ಪ್ರಶಸ್ತಿ ಗೆದ್ದ ತಂಡಕ್ಕಿಂತ ಭಾರತ ತಂಡ ಇದು ಶ್ರೇಷ್ಠ ತಂಡವಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement