ಇಂದಿನಿಂದ ಕಾರಿಯಪ್ಪ ಹಾಕಿ
ಬೆಂಗಳೂರು: ಹಾಕಿ ಕರ್ನಾಟಕ ಮಾರ್ಗದರ್ಶನದಲ್ಲಿ ಕೊಡವ ಸಮಾಜ 17ನೇ ಫೀಲ್ಡ್ ಮಾರ್ಷೆಲ್ ಕೆ.ಎಂ. ಕಾರಿಯಪ್ಪ ಸ್ಮಾರಕ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿದೆ. ನಗರದ ಅಕ್ಕಿ ತಿಮ್ಮನಹಳಿಯಲ್ಲಿರುವ ಹಾಕಿ ಸ್ಟೇಡಿಯಂನಲ್ಲಿ ಮಾರ್ಚ್ 29ರಿಂದ ಏಪ್ರಿಲ್ 6ರವರೆಗೆ ನಡೆಯಲಿದೆ. ಪಂದ್ಯಾವಳಿಯಲ್ಲಿ ಎಂಇಜಿ, ಡಿವೈಇಎಸ್, ಎಂಎಲ್ಐಆರ್ಸಿ, ಕೊಡವ ಸಮಾಜ, ಸಾಯಿ, ಎಎಸ್ಸಿ, ಪಿಸಿಟಿಸಿ ಹಾಗೂ ಸೆಂಟ್ರಲ್ ಎಕ್ಸಸೈಜ್ ಸೇರಿದಂತೆ ಒಟ್ಟು 8 ತಂಡಗಳು ಭಾಗವಹಿಸಲಿವೆ. ಉದ್ಘಾಟನಾ ಪಂದ್ಯದಲ್ಲಿ ಕೊಡವ ಸಮಾಜ ಮತ್ತು ಡಿವೈಇಎಸ್ ತಂಡಗಳು ಭಾಗವಹಿಸಲಿವೆ.