ಡುಪ್ಲೆಸಿಸ್, ಚಂಡಿಮಲ್ಗೆ 1 ಪಂದ್ಯ ನಿಷೇಧ
ಚಿತ್ತಗಾಂಗ್: ಟಿ20ಯಲ್ಲ್ಲಿ ಮಂದಗತಿಯ ಬೌಲಿಂಗ್ ಮಾಡಿದ ಹಿನ್ನಲೆಯಲ್ಲಿ ಶ್ರೀಲಂಕಾ ತಂಡದ ನಾಯಕ ದಿನೇಶ್ ಚಂಡಿಮಲ್ ಹಾಗೂ ದಕ್ಷಿಣ ಆಫ್ರಿಕಾ ನಾಯಕ ಫಫ್ ಡುಪ್ಲೆಸಿಸ್ಗೆ ಒಂದು ಪಂದ್ಯ ನಿಷೇಧ ಹೇರಲಾಗಿದೆ.
ಗುರುವಾರ ನಡೆದ ಪಂದ್ಯಗಳಲ್ಲಿ ಉಭಯ ತಂಡಗಳು ಮಂದಗತಿಯ ಬೌಲಿಂಗ್ ಮಾಡಿದವು. 12 ತಿಂಗಳ ಅಂತರದಲ್ಲ್ಲಿ ಈ ಎರಡೂ ತಂಡಗಳು ಎರಡನೇ ಬಾರಿಗೆ ಮಂದಗತಿಯ ಬೌಲಿಂಗ್ ಮಾಡಿರುವ ಹಿನ್ನೆಲೆಯಲ್ಲಿ ತಂಡಗಳ ನಾಯಕರಿಗೆ ಒಂದು ಪಂದ್ಯ ನಿಷೇಧದ ಶಿಕ್ಷೆ ನೀಡಿದ್ದು, ತಂಡದ ಇತರೆ ಆಟಗಾರರಿಗೆ ದಂಡ ವಿಧಿಸಲಾಗಿದೆ.
ಐಸಿಸಿಯ ನಿಯಮದ ಪ್ರಕಾರ ಒಂದು ತಂಡ 12 ತಿಂಗಳ ಅವಧಿಯಲ್ಲಿ ಒಂದೇ ಮಾದರಿಯ ಕ್ರಿಕೆಟ್ ಪಂದ್ಯದಲ್ಲಿ 2 ಬಾರಿ ನಿಧಾನ ಗತಿಯ ಬೌಲಿಂಗ್ ನಡೆಸಿದರೇ, ಆ ತಂಡದ ನಾಯಕನಿಗೆ ಒಂದು ಪಂದ್ಯದಲ್ಲಿ ನಿಷೇಧದ ಶಿಕ್ಷೆ ನೀಡಲಾಗುವುದು.
ದಕ್ಷಿಣ ಆಫ್ರಿಕಾ ತಂಡ ಇದೇ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಹಾಗೂ ನೆದರ್ಲ್ಯಾಂಡ್ಸ್ ವಿರುದ್ಧ ಮಂದಗತಿಯ ಬೌಲಿಂಗ್ ಮಾಡಿದೆ. ಇನ್ನು ಶ್ರೀಲಂಕಾ ತಂಡ ಕಳೆದ ವರ್ಷ ನವೆಂಬರ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹಾಗೂ ಇಂಗ್ಲೆಂಡ್ ವಿರುದ್ಧ ನಿಧಾನ ಗತಿಯ ಬೌಲಿಂಗ್ ಮಾಡಿದೆ.