ಧೋನಿ ಸುಳ್ಳುಹೇಳಿಲ್ಲ: ಬಿಸಿಸಿಐ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸ್ಪಾಟ್ ಫಿಕ್ಸಿಂಗ್ ಪ್ರಕರಣದ ವಿಚಾರಣೆ ವೇಳೆ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸುಳ್ಳು ಹೇಳಿದ್ದಾರೆ ಎಂದು, ಮಾಡಲಾಗಿದ್ದ ಆರೋಪವನ್ನು ಬಿಸಿಸಿಐ ಸುಪ್ರೀಂ ಕೋರ್ಟ್ನಲ್ಲಿ ತಳ್ಳಿಹಾಕಿದೆ.
ಆದರೆ, ಮಾಧ್ಯಮದಲ್ಲಿ ತಪ್ಪಾಗಿ ಧೋನಿ ಹೆಸರನ್ನು ಎಳೆಯಲಾಗಿದೆ ಎಂದು ಬಿಸಿಸಿಐ ಪ್ರತಿನಿಧಿಸಿರುವ ವಕೀಲರು ತಿಳಿಸಿದರು. ಚೆನ್ನೈ ತಂಡದ ನಾಯಕತ್ವ ವಹಿಸಿರುವ ಧೋನಿ, ತನಿಖೆಯ ವೇಳೆ ಮುದ್ಗಲ್ ಸಮಿತಿ ಎದುರಿಗೆ, ಚೆನ್ನೈ ತಂಡದಲ್ಲಿ ಗುರುನಾಥ್ ಮೇಯಪ್ಪನ್ ವಹಿಸಿದ್ದ ಪಾತ್ರದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ವಕೀಲರಾದ ಹರೀಶ್ ಸಾಳ್ವೆ ಆರೋಪಿಸಿದ್ದಾರೆ ಎಂದು ಬಿಸಿಸಿಐ ತಿಳಿಸಿತು.