ರು. 20 ಕೋಟಿ ತೆರಿಗೆ ಕಟ್ಟಿದ ಧೋನಿ
ಪಾಟ್ನಾ: ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು 2013-14ನೇ ಸಾಲಿನಲ್ಲಿ ಒಟ್ಟು ರು. 20 ಕೋಟಿ ತೆರಿಗೆ ಕಟ್ಟಿದ್ದಾರಂತೆ. ಬಿಹಾರ್ ಮತ್ತು ಜಾರ್ಖಂಡ್ ವಿಭಾಗದಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ತೆರಿಗೆ ಕಟ್ಟಿದ ವ್ಯಕ್ತಿ ಎನಿಸಿದ್ದಾರೆ ಎಂದು ಹಿರಿಯ ತೆರಿಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಸತತ ಆರು ವರ್ಷ ಈ ವಿಭಾಗದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟಿದ ವ್ಯಕ್ತಿ ಎನಿಸಿದ್ದಾರಂತೆ ಧೋನಿ. ಕಳೆದ ವರ್ಷ ಧೋನಿ ರು. 22 ಕೋಟಿ ತೆರಿಗೆ ಕಟ್ಟಿದ್ದರಂತೆ. ಈ ವರ್ಷ ರು. 2 ಕೋಟಿ ಕಡಿಮೆಯಾಗಿದೆಯಂತೆ. ಧೋನಿ ಅವರು ಜಾಹೀರಾತಿನಿಂದ ಪಡೆಯುತ್ತಿದ್ದ ಆದಾಯ ಈ ವರ್ಷ ಕಡಿಮೆಯಾಗಿರಬಹುದು ಎಂದು ಮೂಲಗಳು ತಿಳಿಸಿವೆ.