ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಿಂಡೀಸ್ ದಾಳಿಗೆ ಕಾಂಗರೂ ಕಂಗಾಲು

Rashmi Kasaragodu
Updated On : 29 Mar 2014, 1:01 am

ಮೀರ್ಪುರ: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಂಘಟಿತ ದಾಳಿ ನಡೆಸುವಲ್ಲಿ ಯಶಸ್ವಿಯಾದ ವೆಸ್ಟ್ ಇಂಡೀಸ್ ತಂಡದ ಆಟಗಾರರು ಟಿ20 ವಿಶ್ವಕಪ್ನ ಮಹತ್ವದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಚಕ ಗೆಲವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರ ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಇನ್ನು ಎರಡು ಎಸೆತಗಳು ಬಾಕಿ ಇರುವಂತೆ 6 ವಿಕೆಟ್ಗಳ ಭರ್ಜರಿ ಗೆಲವು ದಾಖಲಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಕಾಂಗರೂ ಪಡೆ, 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 178 ರನ್ಗಳ ಸವಾಲಿನ ಮೊತ್ತ ದಾಖಲಿಸಿತು. ಈ ಮೊತ್ತವನ್ನು ಬೆಂಬತ್ತಿದ ವೆಸ್ಟ್ ಇಂಡೀಸ್ ತಂಡ 19.4 ಓವರ್ಗಳಲ್ಲಿ 4 ವಿಕೆಟ್ಗೆ 179 ರನ್ ದಾಖಲಿಸಿ ಗೆಲವಿನ ನಗೆ ಬೀರಿತು.
ಉತ್ತಮ ಬ್ಯಾಟಿಂಗ್: ಕಾಂಗರೂ ಪಡೆ ನೀಡಿದ ಸವಾಲಿನ ಮೊತ್ತವನ್ನು ಬೆಂಬತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ಉತ್ತಮ ಆರಂಭ ದೊರಿಯಿತು. ಆರಂಭಿಕರಾಗಿ ಕಣಕ್ಕಿಳಿದ ಡ್ವೈನ್ ಸ್ಮಿತ್(17) ಹಾಗೂ ಕ್ರಿಸ್ ಗೇಯ್ಲ್ (53 ರನ್, 35 ಎಸೆತ, 6 ಬೌಂಡರಿ, 2 ಸಿಕ್ಸರ್) 50 ರನ್ಗಳ ಜತೆಯಾಟ ನೀಡಿದರು.
ನಂತರ ಬಂದ ಲೆಂಡ್ಲ್ ಸಿಮನ್ಸ್(26 ರನ್, 24 ಎಸೆತ, 3 ಬೌಂಡರಿ), ಡ್ವೈನ್ ಬ್ರಾವೊ (ಅಜೇಯ 27, 12 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಡಾರೆನ್ ಸಾಮಿ (ಅಜೇಯ 34, 13 ಎಸೆತ, 2 ಬೌಂಡರಿ, 3 ಸಿಕ್ಸರ್) ಉತ್ತಮ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲವಿನ ದಡ ಸೇರಿಸಿದರು.
ಮ್ಯಾಕ್ಸ್ವೆಲ್ ಆಟ ವ್ಯರ್ಥ: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾಗಿದ್ದು ಗ್ಲೆನ್ ಮ್ಯಾಕ್ಸ್ವೆಲ್(45 ರನ್, 22 ಎಸೆತ, 5 ಬೌಂಡರಿ, 3 ಸಿಕ್ಸರ್). ಕೇವಲ 41 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು ಮ್ಯಾಕ್ಸ್ವೆಲ್ ಸವಾಲಿನ ಮೊತ್ತ ಪೇರಿಸುವಂತೆ ಮಾಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಹಿರಿಯ ಬ್ಯಾಟ್ಸ್ಮನ್ ಬ್ರಾಡ್ ಹಾಡ್ಜ್ (35 ರನ್, 26 ಎಸೆತ, 2 ಬೌಂಡರಿ, 2 ಸಿಕ್ಸರ್) ತಂಡಕ್ಕೆ ನೆರವಾದರು.
  ವಿಂಡೀಸ್ ಪರ ಸ್ಯಾಮುಯೆಲ್ ಬದ್ರಿ, ಸುನಿಲ್ ನಾರಾಯಣ್ ಹಾಗೂ ಮರ್ಲಾನ್ ಸ್ಯಾಮುಯೆಲ್ಸ್ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ 20 ಓವರ್ಗಳಲ್ಲಿ 8 ವಿಕೆಟ್ಗೆ 178 (ಮ್ಯಾಕ್ಸ್ವೆಲ್ 45, ಹಾಡ್ಜ್ 35, ನಾರಾಯಣ್ 19ಕ್ಕೆ2)
ವೆಸ್ಟ್ ಇಂಡೀಸ್ 19.4 ಓವರ್ಗಳಲ್ಲಿ 4 ವಿಕೆಟ್ಗೆ 179 (ಗೇಯ್ಲ್ 53, ಸಾಮಿ ಅಜೇಯ 34, ಸ್ಟಾರ್ಕ್ 50ಕ್ಕೆ2)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement